Site icon Ullalavani

ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಆರಂಭ: ವಿದ್ಯಾರ್ಥಿಗಳಿಗೆ ಶುಭಕೋರಿದ ಡಿಕೆ ಶಿವಕುಮಾರ್

ಬೆಂಗಳೂರು, ಜೂ. 01 : ಬೇಸಿಗೆ ರಜೆ ಬಳಿಕ ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಶುಭಕೋರಿದ್ದಾರೆ.


“ಭವ್ಯ ಕರ್ನಾಟಕದ ಭವಿಷ್ಯದ ಆಶಾಕಿರಣಗಳಾದ ನಮ್ಮ ನಾಡಿನ ಹೆಮ್ಮೆಯ ವಿದ್ಯಾರ್ಥಿ ಮಿತ್ರರಿಗೆ ಹೊಸ ಶೈಕ್ಷಣಿಕ ವರ್ಷದ ಹಾರ್ದಿಕ ಶುಭಾಶಯಗಳು. ಶಾಲೆ ಎಂಬ ಜ್ಞಾನ ದೇಗುಲದಲ್ಲಿ ನಿಮ್ಮ ಕನಸುಗಳು ಚಿಗುರಲಿ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೂಲಕ ನೀವು ಅಂದುಕೊಂಡ ಗುರಿ ನಿಮ್ಮದಾಗಲಿ. ನಿಮ್ಮ ಸಾಧನೆಗಳು ನಮ್ಮ ಹೆಮ್ಮೆಯ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಹಾರೈಸುತ್ತೇನೆ” ಎಂದು ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.2026-27ನೇ ಸಾಲಿನ ಶೈಕ್ಷಣಿಕ ತರಗತಿಗಳು ಇಂದಿನಿಂದ ಪ್ರಾರಂಭಗೊಂಡಿದ್ದು, ಮಕ್ಕಳಲ್ಲಿ ಶಾಲಾ ಪ್ರಾರಂಭದ ಸಂಭ್ರಮ ಜೋರಾಗಿದೆ. ಇನ್ನು ಶಿಕ್ಷಣ ಇಲಾಖೆ ಹಬ್ಬದ ವಾತಾವರಣ, ಸಂಭ್ರಮ, ಸಡಗರದಿಂದ ಮಕ್ಕಳನ್ನ ಸ್ವಾಗತ ಮಾಡಲು ಆದೇಶಿಸಿದ್ದು, ಮಧ್ಯಾಹ್ನ ಬಿಸಿಯೂಟದಲ್ಲಿ ಸಿಹಿ ಮಾಡಲು ಸೂಚನೆ ನೀಡಿತ್ತು. ಅದರಂತೆ ಶಾಲೆಯನ್ನ ತಳಿರು-ತೋರಣ, ರಂಗೋಲಿಯಿಂದ ಸಿಂಗಾರ ಮಾಡಿ, ಶಿಕ್ಷಕರು ಮಕ್ಕಳನ್ನು ಸ್ವಾಗತಿಸಿದ್ದಾರೆ.

Exit mobile version