Site icon Ullalavani

ಬಿಜೆಪಿ ಭದ್ರಕೋಟೆ ಮಾಡೂರು ಅಭಿವೃದ್ಧಿಗೆ ಪಕ್ಷದಿಂದ ಸಂಪೂರ್ಣ ಸಹಕಾರ : ಸುಜಿತ್‌ ಮಾಡೂರು

ಉಳ್ಳಾಲ: ಬಿಜೆಪಿಯ ಭದ್ರಕೋಟೆ ಮಾಡೂರಿನ ಅರಸುನಗರಕ್ಕೆ, ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿದ್ದ ಉಸ್ತುವಾರಿ ಸಚಿವರು, ಸಂಸದರು, ಸ್ಥಳೀಯಾಡಳಿತ, ಪಕ್ಷದ ರಾಜ್ಯಾಧ್ಯಕ್ಷರ ಸ್ಪಂಧನೆಯಿಂದ ಗ್ರಾಮದ ಜನರ ೧೮ ವರ್ಷಗಳ ಕನಸು ನನಸಾಗಿದೆ ಎಂದು ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಸುಜಿತ್‌ ಮಾಡೂರು ಹೇಳಿದರು.
ಅವರು ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಡೂರು ಶಾಲೆ ಎದುರಿನ ಕಾಂಕ್ರೀಟಿಕರಣಗೊಂಡ ಅರಸುನಗರ ೨ ನೇ ಅಡ್ಡರಸ್ತೆ ಹಾಗೂ ೩ ನೇ ಅಡ್ಡರಸ್ತೆಯ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮದ ಹಿರಿಯ ಸುಂದರಿ ಅವರು ರಸ್ತೆಯನ್ನು ಉದ್ಘಾಟಿಸಿದರು.
೧೮ ವರ್ಷಗಳ ಬಹುಬೇಡಿಕೆಯ ರಸ್ತೆಯ ಕಾಂಕ್ರೀಟಿಕರಣಕ್ಕೆ ಶಾಸಕರು ನೀಡಬೇಕಾದಂತಹ ಅನುದಾನವನ್ನು ಕೌನ್ಸಿಲರ್‌ ಒದಗಿಸಬಹುದೇ ಅನ್ನುವ ಪ್ರಶ್ನೆಯಿತ್ತು. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ಉಸ್ತುವಾರಿ ಸಚಿವರಾಗಿದ್ದ ಸುನಿಲ್‌ ಕುಮಾರ್‌ ನಗರೋತ್ಥಾನ ಅನುದಾನ, ಅಂದಿನ ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ರೂ. ೫ ಲಕ್ಷ ಅನುದಾನ ಇಟ್ಟಿದ್ದರು. ನಳಿನ್‌ ಕಟೀಲ್‌ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭ ತಹಶೀಲ್ದಾರ್‌ ಅವರನ್ನು ಸ್ಥಳಕ್ಕೆ ಕರೆಸಿ ಸ್ಥಳಿಯಾಡಳಿತದಿಂದ ಅನುದಾನ ಇರಿಸಲು ಸೂಚಿಸಿದಂತೆ ಸ್ಥಳೀಯಾಡಳಿತ , ವಿವಿಧ ಇಲಾಖೆಗಳ ಗಮನ ಸೆಳೆದು ಬಿಜೆಪಿ ಪಕ್ಷದಿಂದ ಸಂಪೂರ್ಣ ಸಹಕಾರದೊಂದಿಗೆ ಭದ್ರಕೋಟೆಯ ಅಭಿವೃದ್ಧಿಯನ್ನು ನಡೆಸಲಾಗಿದೆ. ಮುಂದಿನ ಯೋಜನೆಗಳಿಗೂ ಎಲ್ಲರಿಂದ ಸಹಕಾರ ದೊರಕಲಿ, ಶಾಲೆ ಎದುರಿನ ಚರಂಡಿಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಅನುದಾನ ಇಡಲಾಗಿತ್ತು, ಆದರೆ ಅದನ್ನು ಶಾಸಕರು ಅಜ್ಜಿನಡ್ಕ ಅಂಗನವಾಡಿಗೆ ಮೀಸಲಿಟ್ಟಿದ್ದರಿಂದಾಗಿ ಚರಂಡಿ ಅಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭ ಕೋಟೆಕಾರು ಗ್ರಾ.ಪಂ ಮಾಜಿ ಸದಸ್ಯೆ ಲೀನಾ ಜೆ.ಶೆಟ್ಟಿ, ವಾರ್ಡ್‌ ಬೂತ್‌ ಮಾಜಿ ಅಧ್ಯಕ್ಷರಾದ ವಿಶ್ವರಾಜ್‌, ಸದಸ್ಯರಾದ ಹರೀಶ್‌ ರಾಜ್‌ , ದಿನೇಶ್‌, ಸದಾಶಿವ, ಹರೀಶ್‌ ಆಚಾರ್ಯ, ಶಶಿಧರ್‌ ಮಾಡೂರು, ವಿಖ್ಯಾತ್‌, ರಾಮಣ್ಣ ಪೂಜಾರಿ, ಪವನ್‌ ಶೆಟ್ಟಿ, ಮಹೇಶ್‌ ರಾವ್‌, ಶಶಿ, ಪ್ರೇಮಾ, ದೇವಕಿ, ಸಮಿತಾ ಶೆಟ್ಟಿ, ಸಂಗೀತ, ಪವಿತ್ರ ಉಪಸ್ಥಿತರಿದ್ದರು.

Exit mobile version