Site icon Ullalavani

ಮುಡಿಪು : ಭಾರತ್ ಚಿಕನ್ ಸ್ಟಾಲ್ ಮಾಲೀಕ ಹೃದಯಾಘಾತಕ್ಕೆ ಬಲಿ..!

ಮುಡಿಪು : ಇಲ್ಲಿನ ಪಿ.ಕೆ ಟವರ್ಸ್ ನಲ್ಲಿ ಕಳೆದ ಸುಮಾರು 30 ವರ್ಷಗಳಿಂದ ಭಾರತ್ ಚಿಕನ್ ಸ್ಟಾಲ್ ನಡೆಸುತ್ತಿದ್ದ ಉದ್ಯಮಿ ಇರಾ ಗ್ರಾಮದ ನಿವಾಸಿ ಅಬ್ದುಲ್ ರೆಹಮಾನ್ (55) ಇವರು ಹೃದಯಘಾತಕ್ಕೀಡಾಗಿ ಇಂದು ಸ್ವಗೃಹದಲ್ಲಿ ನಸುಕಿನ ಜಾವ ನಿಧನ ಹೊಂದಿದರು.


ಸರಳ ಸ್ವಭಾವದ ಪ್ರಾಮಾಣಿಕ ವ್ಯಕ್ತಿತ್ವದವರಾಗಿದ್ದ ರೆಹಮಾನ್ ಫಜಲ್ ಜುಮಾ ಮಸೀದಿ ಪಂಜಿಕಲ್ಲು ಇರಾ ಮಂಚಿ ಇದರ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಹಾಗೂ ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Exit mobile version