Site icon Ullalavani

ಬಾಳೆಪುಣಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ಉಳ್ಳಾಲ ತಾಲ್ಲೂಕಿನ ಇರಾ ಗ್ರಾಮದ ಬಾಳೆಪುಣಿ ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಮಸೀದಿಯ ಇಮಾಂ ಹಾರಿಸ್ ಹನೀಫಿ ಕುತುಬಾ ನಿರ್ವಹಿಸಿ ಈದ್ ನಮಾಜಿಗೆ ನೇತೃತ್ವ ನೀಡಿದರು. ಬಳಿಕ ಮಸೀದಿಯ ಧಾರ್ಮಿಕ ಗುರುಗಳಾದ ಅಲಿ ಪೈಝಿ ಉಸ್ತಾದ್ ಅವರು ಈದ್ ಸಂದೇಶ ನೀಡಿ, ಸಹೋದರತ್ವ, ಶಾಂತಿ ಮತ್ತು ಸೌಹಾರ್ದತೆಯ ಮಹತ್ವವನ್ನು ತಿಳಿಸಿದರು.

ನಮಾಜಿನ ಬಳಿಕ ಹಿರಿಯರು, ಕಿರಿಯರು ಹಾಗೂ ಗೆಳೆಯರು ಪರಸ್ಪರ ಹಸ್ತಲಾಘವದೊಂದಿಗೆ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಇದೇ ವೇಳೆ ಊರಿನಲ್ಲಿ ಮರಣ ಹೊಂದಿದವರ ಆತ್ಮಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Exit mobile version