ಮುನ್ನೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಟದ ಮೈದಾನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿವೈಎಫ್‌ಐ (DYFI) ಕುತ್ತಾರ್–ಬಟ್ಟೆದಡಿ ಘಟಕದ ನಿಯೋಗವು ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಗ್ರಾಮದ ಜನತೆಗೆ ಸಮರ್ಪಕ ಆರೋಗ್ಯ ಸೇವೆ ದೊರಕಬೇಕಾದ ಅಗತ್ಯವಿದ್ದು, ಯುವಕರ ಕ್ರೀಡಾ ಚಟುವಟಿಕೆಗಳಿಗೆ ಸೂಕ್ತ ಆಟದ ಮೈದಾನ ನಿರ್ಮಾಣ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಕುತ್ತಾರ್ ಘಟಕದ ಕಾರ್ಯದರ್ಶಿ ವಿಕಾಸ್ ಕುತ್ತಾರ್ ಸೇರಿದಂತೆ ಮುಖಂಡರಾದ ಸುನೀಲ್ ತೇವುಲ, ನಿತಿನ್ ಕುತ್ತಾರ್, ಸಂಕೇತ್ ಕಂಪ, ಧನಂಜಯ ಕಾರ್ದಿಕಂಡ, ನಿತೇಶ್ ತಲೆನೀರು, ಧೀರಜ್ ಬಟ್ಟೆದಡಿ, ಕಿಶನ್ ತಲೆನೀರು, ಸುಪ್ರೀತ್ ಬಾಕಿಮಾರ್, ಗುರುರಾಜ್ ತೇವುಲ, ವರ್ಶಿತ್ ಆಯೆರೆಬೆಟ್ಟು, ಭುವನ್ ಕಂಪ ಹಾಗೂ ರಕ್ಷನ್ ಬೊಳಕ ಉಪಸ್ಥಿತರಿದ್ದರು.