ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಎತ್ತಿನ ಹೊಳೆ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ರವರ ನೇತೃತ್ವದಲ್ಲಿ ಅ. 10ರಿಂದ ಅ. 13ರವರೆಗೆ `ನೇತ್ರಾವತಿ ರಕ್ಷಿಸಿ ದ.ಕ. ಉಳಿಸಿ’ ಘೋಷಣೆಯೊಂದಿಗೆ `ನಮ್ಮ ನಡೆ ಎತ್ತಿನ ಹೊಳೆಗೆ’ ಎಂಬ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ ಸುಮಾರು 2500 ಬಾಜಪಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ತಿಳಿಸಿದರು.
ತೊಕ್ಕೊಟ್ಟು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎತ್ತಿನ ಹೊಳೆ ಯೋಜನೆಯನ್ನು ಕಾರ್ಯಗತಗೊಳಿಸುವ ಮುಖಾಂತರ ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನೆಗಳನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಎತ್ತಿನ ಹೊಳೆ ಕಾಮಗಾರಿಗೆ ರಾಷ್ಟ್ರೀಯ ಹಸಿರು ಪೀಠದ ತಡೆಯಾಜ್ಞÉ ಇದ್ದರೂ 13500 ಕೋಟಿ ರೂ. ಈ ಯೋಜನೆಯನ್ನು ಮುಂದುವರಿಸುತ್ತಿರುವುದು ರಾಜ್ಯ ಸರ್ಕಾರ ಧೋರಣೆ ಸಂಶಯಕ್ಕೆ ಎಡೆಮಾಡಿದ್ದು, ಯೋಜನೆಯಿಂದ ದ.ಕ. ಜಿಲ್ಲೆಯ ಕೃಷಿ, ಮೀನುಗಾರಿಕೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗುವುದಲ್ಲದೆ ಉದ್ದೇಶಿತ ಯೋಜನೆಯಿಂದ ಕೋಲಾರ ಹಾಗೂ ಚಿಕ್ಕಾಬಳ್ಳಾಪುರಕ್ಕೆ 4 ಟಿ ಎಮ್ ಸಿ ನೀರು ಕೂಡಾ ಹರಿಸಲಾಗದು. ಆದುದರಿಂದ ತಕ್ಷಣ ರಾಜ್ಯ ಸರ್ಕಾರ ಈ ಕಾಮಗಾರಿಯನ್ನು ನಿಲ್ಲಿಸಬೇಕು. ದ.ಕ ಜಿಲ್ಲೆಯ ಜನಪ್ರತಿನಿ„ಗಳನ್ನು ಹೋರಾಟಗಾರರನ್ನು ಪರಿಸರಾಸಕ್ತರನ್ನು ಸೇರಿಸಿ ಮಂಗಳೂರಿನಲ್ಲಿ ಸಂವಾದ ನಡೆಸಿ ಎತ್ತಿನ ಹೊಳೆ ಯೋಜನೆಯಿಂದ ದ.ಕ. ಜಿಲ್ಲೆಗೆ ಆಗುವ ತೋಂದರೆ ಮಾಹಿತಿಯನ್ನು ನೀಡಬೇಕು ಎಂದರು.
ಪಾದಯಾತ್ರೆಯ ಪೂರ್ವ ಭಾವಿಯಾಗಿ ಅ. 10ರಂದು ಬೆಳಗ್ಗೆ 8.30ಕ್ಕೆ ತೊಕ್ಕೊಟ್ಟು ಜಂಕ್ಷನ್‍ನಿಂದ ಕಾರ್ಯಕರ್ತರು ಹೊಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ತಾಲೂಕು ಪಂಚಾಯತ್ ಸದಸ್ಯೆ ದೇವಕಿ ರಾಘವ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಸಂಜೀವ ಶೆಟ್ಟಿ ಅಂಬ್ಲಮೊಗರು, ಯಶವಂತ ಅಮೀನ್, ಹರಿಯಪ್ಪ ಸಾಲಿಯಾನ್, ಚರಣ್‍ರಾಜ್ ಉಪಸ್ಥಿತದ್ದರು.