ತೊಕ್ಕೊಟ್ಟು: ಮಂಗಳೂರು-ಬಿ.ಸಿ.ರೋಡ್ ನಡುವೆ ಚಲಿಸುವ ಶಾರದಾ ಬಸ್ಸಿನ ಅವ್ಯವಸ್ಥೆ ಕುರಿತು ಉಳ್ಳಾಲವಾಣಿ ನಡೆಸಿದ ವರದಿಯನ್ನು ಗಮನಿಸಿದ ಮಾಲೀಕರು ತಕ್ಷಣವೇ ಸ್ಪಂಧಿಸಿ ಬಸ್ಸನ್ನು ದುರಸ್ತಿಗೊಳಿಸಿದ್ದು, ಹೊಸ ಪೈಂಟ್ ಆಗಿ ಮತ್ತೆ ಬಸ್ಸು ರಸ್ತೆಗಿಳಿದಿದ್ದು, ಈ ಬಗ್ಗೆ ಪ್ರಯಾಣಿಕರು ಉಳ್ಳಾಲವಾಣಿ ಹಾಗೂ ಮಾಲೀಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಬಸ್ಸು ಒಳಗಡೆ ಲಿಂಕ್ ರಾಡ್ ಸಂಪೂರ್ಣ ಎದ್ದುಬಂದು, ಕೆಳಗಿನ ರಸೆ ಕಾಣುತಿತ್ತು. ಈ ಕುರಿತು ಉಳ್ಳಾಲವಾಣಿ ಛಾನೆಲ್ ಹಾಗೂ ಇನ್ಸ್ಟಾ ಪೋಸ್ಟ್ ಮೂಲಕ ವರದಿ ನಡೆಸಿ, ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವಂತೆ ವರದಿಯಲ್ಲಿ ಉಲ್ಲೇಖಿಸಿತ್ತು. ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ಬಸ್ಸನ್ನು ಮಾಲೀಕರು ರಿ ಪೈಂಟಿಂಗ್ ಮತ್ತು ದುರಸ್ತಿಗೊಳಿಸಿದ್ದಾರೆ. ವರದಿಯಿಂದ ಬಸ್ಸು ಸಿಬ್ಬಂದಿಗೆ ಹಾಗೂ ಗುತ್ತಿಗೆದಾರರಿಗೆ ನೋವಾಗಿತ್ತು ಎಂಬುದು ಪ್ರಯಾಣಿಕರಿಂದಲೇ ತಿಳಿದುಬಂದಿತ್ತು. ಆದರೆ ಸುರಕ್ಷತಾ ದೃಷ್ಟಿಯಿಂದ ಪ್ರಯಾಣಿಕರೇ ಬಸ್ಸಿನ ದುರಸ್ತಿಗೆ ಒತ್ತಾಯಿಸಿದ್ದಾಗ ಪ್ರತಿಕ್ರಿಯಿಸದೇ ಇದ್ದಾಗ , ನೊಂದ ಪ್ರಯಾಣಿಕರು ಉಳ್ಳಾಲವಾಣಿಯನ್ನು ಸಂಪರ್ಕಿಸಿದ್ದರು.
