Site icon Ullalavani

ವಿದ್ಯಾರ್ಥಿಗಳಿಗೆ ಸನ್ಮಾನ, ಉಚಿತ ಪುಸ್ತಕ ವಿತರಣೆ

ಉಳ್ಳಾಲ: ಸೋಶಿಯಲ್ ಟೀಮ್ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ತಲಪಾಡಿಯಲ್ಲಿ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಅಬ್ದುಲ್ ರಶೀದ್ ಝೈನಿ ಅವರು, ಶಿಕ್ಷಣದ ಮಹತ್ವ ಹಾಗೂ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೀಡುವ ಸಹಕಾರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಉದ್ಯಮಿ ಇಬ್ರಾಹೀಮ್ ಪೂಮಣ್ಣು ಮಾತನಾಡಿ, ದೇಶದಲ್ಲಿ ಶಿಕ್ಷಣ ಅಭಿವೃದ್ಧಿ ಆಗಲು ಎಲ್ಲರೂ ಪ್ರೋತ್ಸಾಹ ನೀಡಬೇಕು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿರುವುದು ಶ್ಲಾಘನೀಯ ಎಂದರು
ಈ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು,
ಬಡ ಕುಟುಂಬದ ವ್ಯಕ್ತಿ ಯ ಚಿಕಿತ್ಸೆಗೆ , ಐದು ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಸಲು ಸಹಾಯ ಧನ ಚೆಕ್ ವಿತರಣೆ ಮಾಡಲಾಯಿತು.


ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ, ಸೋಶಿಯಲ್ ಫಾರೂಕ್,ಇಬ್ರಾಹಿಂ ಹುಸೈನ್, ಆಸ್ಪಕ್ ಮರವೂರ್, ವಾಣಿ ತಲಪಾಡಿ , ಹಾಗೂ ನಝಿಮಾ ರವರನ್ನು ಸನ್ಮಾನಿಸಲಾಯಿತು,


ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಅಶ್ಫಾಕ್ ಮರವೂರು, ತಲಪಾಡಿ ಗ್ರಾ.ಪಂ.ಪಿಡಿಒ ಸಂಧ್ಯಾ,
ಕೋಟೆಕಾರ್ ವ್ಯವಸಾಯ ಸೇವಾಸಹಕಾರಿಸಂಘ ಅಧ್ಯಕ್ಷ ಕೃಷ್ಣ ಶೆಟ್ಟಿ , ಸಲಾಮ್ ಕೆಸಿರೋಡ್, ಅಬ್ಬಾಸ್ ಉಚ್ಚಿಲ, ಸಂಶುದ್ದೀನ್ ಉಚ್ಚಿಲ, ಜಯ ಪ್ರಕಾಶ್ ಎಂ ಆರ್,ಬಿ ಎಸ್ ಇಸ್ಮಾಯಿಲ್,ವೈಭವ ಶೆಟ್ಟಿ ,ಇಬ್ರಾಹಿಂ, ಮಕ್ಯಾರ್ ಅಬ್ದುಲ್ ಖಾದರ್, ಮತ್ತಿತರರು ಉಪಸ್ಥಿತರಿದ್ದರು.


ಸೋಶಿಯಲ್ ಫಾರೂಕ್ ಸ್ವಾಗತಿಸಿದರು.ಇಸ್ಮಾಯಿಲ್ ವಂದಿಸಿದರು.

Exit mobile version