Site icon Ullalavani

ಮೇ.21 ರಂದು ಮಂಗಳೂರು ವಿವಿಯಲ್ಲಿ ಪ್ರೊ.ಬಿ.ಎ.ವಿವೇಕ ರೈ ಅವರ ಎಂಬತ್ತರ ಸಂಭ್ರಮ, ಕಲಾಭಿನಂದನೆ


ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇವರ ವತಿಯಿಂದ ಪಂಪ ಪ್ರಶಸ್ತಿ ಪುರಸ್ಕೃತ ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಬಿ. ಎ. ವಿವೇಕ ರೈ ಇವರಿಗೆ ಎಂಬತ್ತು ವರ್ಷ ತುಂಬಿದ ಸಂಭ್ರಮದ ಪ್ರಯುಕ್ತ ಅವರ ವಿದ್ಯಾರ್ಥಿಗಳಾದ ಕಲಾವಿದರಿಂದ ಕಲಾಭಿನಂದನೆ ಮತ್ತು ತಾಳಮದ್ದಲೆ ಕಾರ್ಯಕ್ರಮವು 21 ರಂದು ಗುರುವಾರ ಅಪರಾಹ್ನ 2.30 ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಯು.ಆರ್ .ರಾವ್ ಸಭಾಂಗಣದಲ್ಲಿ ನಡೆಯಲಿದೆ.


ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು, ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರು ಅಭಿವಂದ‌ನಾ ನುಡಿಗಳನ್ನಾಡಲಿದ್ದಾರೆ.
ಬಳಿಕ ನಡೆಯುವ ಭೀಷ್ಮಾರ್ಜುನ ಕಾಳಗ ತಾಳಮದ್ದಳೆಯಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ
, ಚೆಂಡೆ / ಮದ್ದಲೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್,ಮುರಳೀಧರ ಕಲ್ಲೂರಾಯ,
ಅರ್ಥಧಾರಿಗಳಾಗಿ ಗಣರಾಜ ಕುಂಬಳೆ, ರಾಧಾಕೃಷ್ಣ ಕಲ್ಚಾರ್, ನಾಗವೇಣಿ ಮಂಚಿ ಭಾಗವಹಿಸಲಿದ್ದಾರೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ
ಡಾ.ಧನಂಜಯ ಕುಂಬ್ಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version