Site icon Ullalavani

ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ (ರಿ) ಭಟ್ನಗರದ ಸುವರ್ಣ ಮಹೋತ್ಸವ ಪೂರ್ವಭಾವಿ ಸಭೆ

ಮುಹಮ್ಮದ್ ತೋಹಾ ಸುವರ್ಣಮಹೋತ್ಸವ ಸಮಾರಂಭದ ಅಧ್ಯಕ್ಷರಾಗಿ ಆಯ್ಕೆ

ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ (ರಿ) ಭಟ್ನಗರ ಸಂಸ್ಥೆಯ ಸುವರ್ಣ ಸಂಭ್ರಮ ಮಿಲನದ ಅಂಗವಾಗಿ ಪೂರ್ವಭಾವಿ ಸಭೆ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ನವೀನ್ ಪೂಜಾರಿ ಭಟ್ನಗರ ವಹಿಸಿದರು.

ಸಭೆಯಲ್ಲಿ ಪ್ರಧಾನ ಸಂಚಾಲಕರಾದ ಸಿರಿಲ್ ರಾಬರ್ಟ್ ಡಿ ಸೋಜ ಅವರು ಸಂಸ್ಥೆಯ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. 1977ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯ ಎಲ್ಲಾ ಸದಸ್ಯರನ್ನು ಭೇಟಿ ಮಾಡುವುದರ ಜೊತೆಗೆ, ಈ ಅವಧಿಯಲ್ಲಿ ನಿಧನರಾದ ಸದಸ್ಯರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಸಂಸ್ಥೆಯ ಹಿತೈಷಿಗಳು ಹಾಗೂ ಅಭಿಮಾನಿಗಳನ್ನು ಒಳಗೊಂಡಂತೆ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯಲ್ಲಿ 2027ರಲ್ಲಿ ನಡೆಯಲಿರುವ ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸುವ ಕುರಿತು ಸದಸ್ಯರು ವಿವಿಧ ಸಲಹೆ-ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದ ಯಶಸ್ಸಿಗಾಗಿ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಪದಾಧಿಕಾರಿಗಳು:

ಸುವರ್ಣ ಮಹೋತ್ಸವ ಸಂಭ್ರಮ ಸಮಿತಿಯ ಅಧ್ಯಕ್ಷರು:
ಮುಹಮ್ಮದ್ ತೋಹಾ

ಕಾರ್ಯಾಧ್ಯಕ್ಷರು:
ರಘುರಾಮ ಶೆಟ್ಟಿ ಕಾಪಿಕಾಡ್,
ಪ್ರಕಾಶ್ ಪಿಂಟೊ ಕೆರೆಬೈಲ್,
ಹರೀಶ್ ಆಳ್ವ ಉಳ್ಳಾಲಬೈಲ್

ಕೋಶಾಧ್ಯಕ್ಷರು:
ಮೋಹನ್ ಬಂಗೇರ ಭಟ್ನಗರ

ಪ್ರಧಾನ ಸಂಚಾಲಕರು:
ಸಿರಿಲ್ ರಾಬರ್ಟ್ ಡಿ ಸೋಜ ಭಟ್ನಗರ

ಸಂಚಾಲಕರು:
ವಿದ್ಯಾಧರ್ ಶೆಟ್ಟಿ (ಪೊಸ ಕುರಳ್ ಮಾಧ್ಯಮ),
ವಸಂತ ಉಳ್ಳಾಲ ಚೆಂಬುಗುಡ್ಡೆ,
ಹೇಮಚಂದ್ರ ಬಬ್ಬುಕಟ್ಟೆ,
ಸದಾನಂದ ಒಂಬತ್ತುಕೆರೆ,
ಯು.ಹೆಚ್. ಅಲ್ತಾಫ್,
ಉರ್ಬಾನ್ ಲಾರೆನ್ಸ್ ಡಿ ಸೋಜ,
ಉದಯ ಗಟ್ಟಿ ಕಾಪಿಕಾಡ್,
ಕೊರಗಪ್ಪ ಧರ್ಮನಗರ,
ಮಾಧವ ಗಟ್ಟಿ ಸರಸ್ವತಿ ಕಾಲೊನಿ,
ಲವಿತ್ ಉಳ್ಳಾಲಬೈಲ್,
ಚಂದ್ರಶೇಖರ ಬೋಳಾರ್,
ಹರೀಶ್ ಆಚಾರ್ಯ ಸುರತ್ಕಲ್,
ಆನಂದ ಧರ್ಮನಗರ,
ಜಯಪ್ರಕಾಶ್ ಮಾಡೂರು,
ರೋಹನ್ ತೊಕ್ಕೊಟ್ಟು,
ರೋಹಿತ್ ಉಳ್ಳಾಲ ಕಾಪಿಕಾಡ್,
ಚಂದ್ರಶೇಖರ್ ಉಚ್ಚಿಲ,
ಯು.ಎಂ. ಹಮೀದ್ ಮುಕ್ಕಚೇರಿ,
ಮೋಹನ್ ದಾಸ್ ಕಾಪಿಕಾಡ್,
ಪ್ರವೀಣ್ ಕುಂಪಲ,
ಬಿ. ಮನಮೋಹನ್ ರಾವ್,
ನಾಗೇಶ್ ಅಡ್ಕ,
ಸುಕುಮಾರ ತೊಕ್ಕೊಟ್ಟು ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯ ಅಂತ್ಯದಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ವೈಭವದಿಂದ ಆಚರಿಸಲು ಎಲ್ಲ ಸದಸ್ಯರು ಸಂಕಲ್ಪ ವ್ಯಕ್ತಪಡಿಸಿದರು.

Exit mobile version