Site icon Ullalavani

ಸಿ.ಎಚ್. ಮಹಮ್ಮದ್ ಅವರಿಗೆ ಗೌರವ ಸನ್ಮಾನ

ಇರಾ ಗ್ರಾಮದ ಬಾಳೆಪುಣಿ ನಿವಾಸಿ ಸಿ.ಎಚ್. ಮಹಮ್ಮದ್ ಅವರಿಗೆ ಮರ್ಹೂಂ ಹಾಜಿ ಅಬ್ದುಲ್ ರಹಿಮಾನ್ ಹಾಗೂ ಅಳಕೆ ಮಜಲ್ ಕುಟುಂಬದ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಿದ್ದೀಕ್ ಅವರ ಮನೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಮಾಜಮುಖಿ ಸೇವೆ ಹಾಗೂ ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಿ.ಎಚ್. ಮಹಮ್ಮದ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಬಂಧುಬಳಗ ಹಾಗೂ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

Exit mobile version