Site icon Ullalavani

ತಲವಾರು ತೋರಿಸಿ ಲಕ್ಷಾಂತರ ರೂ. ದರೋಡೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು : ತೊಕ್ಕೊಟ್ಟಿನ ವೈನ್ ಶಾಪ್ ಮಾಲಕನಿಗೆ ತಲವಾರು ತೋರಿಸಿ 1.68 ಲಕ್ಷ ರೂ. ದರೋಡೆ ಮಾಡಿ ಪರಾರಿಯಾದ ಘಟನೆ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಘಟನೆಗೆ ಸಂಬಂಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಕ್ಕೊಟ್ಟು ಜಂಕ್ಷನ್ ಬಳಿ ವೈನ್‍ಶಾಪ್ ಹೊಂದಿರುವ ಹರೀಶ್ ಶೆಟ್ಟಿ ಎಂಬವರೇ ದರೋಡೆಗೊಳಗಾದವರು. ವೈನ್ ಶಾಪ್‍ನಲ್ಲಿ ವ್ಯವಹಾರ ಮುಗಿಸಿ ಹಣದೊಂದಿಗೆ ಕಾರಿನಲ್ಲಿ ಕುಳಿತುಕೊಂಡಾಗ ಏಕಾಏಕಿ ಆಗಮಿಸಿದ ಮೂವರು ಆಗಂತುಕರು ತಲವಾರಿನಿಂದ ಕಾರಿನ ಗಾಜನ್ನು ಹೊಡೆದು ಅವರ ಕೈಯಿಂದ ಹಣವನ್ನು ಎಳೆದು ಬೈಕ್ ಮತ್ತು ಕಾರಿನಲ್ಲಿ ಪರಾರಿಯಾಗಿದ್ದರೆ. ಸಂದರ್ಭದಲ್ಲಿ ಹರೀಶ್ ಅವರ ಕುತ್ತಿಗೆಯಲ್ಲಿ ಬಂಗಾರದ ಸರಕ್ಕೂ ಕೈ ಹಾಕಿ ಎಳೆದಿದ್ದು, ಅದು ತುಂಡಾಗಿ ಅಂಗಿಯೊಳಗೆ ಬಿದ್ದಿತ್ತು. ಹರೀಶ್ ಅವರ ಬೊಬ್ಬೆ ಕೇಳಿ ಸ್ಥಳೀಯ ಅಂಗಡಿಯವರು ಓಡಿ ಬಂದಾಗ ದರೋಡೆಕೋರರು ಪರಾರಿಯಾಗಿದ್ದರು.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version