Site icon Ullalavani

ಮಂಗಳೂರು ವಿವಿಯಲ್ಲಿ ಏ.27ರಂದು ರಕ್ತದಾನ ಶಿಬಿರ

ಕೊಣಾಜೆ: Mangalore University ಪುರುಷರ ವಸತಿ ನಿಲಯದ ವಿದ್ಯಾರ್ಥಿ ಪರಿಷತ್ತು ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ, Indian Red Cross Society ಸಹಯೋಗದೊಂದಿಗೆ ಏಪ್ರಿಲ್ 27ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ವಿದ್ಯಾರ್ಥಿ ನಾಯಕ Abhishek Valmiki ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಶಿಬಿರಕ್ಕೆ ಚಾಲನೆ ನೀಡಲಿದ್ದು, ಪರೀಕ್ಷಾಂಗ ಕುಲಸಚಿವ Devendrappa H ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೇಶಕರಾದ Mohan S Singhe ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರೊ. ಬೋಜ ಪೂಜಾರಿ ಹಾಗೂ ಡಾ. ರಮೇಶ್ ಹೆಚ್.ಎನ್ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಕ್ತದಾನ ಶಿಬಿರವು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ, ಕೊಣಾಜೆಯ ವಿಜ್ಞಾನ ಸಂಕೀರ್ಣದ ಡಾ. ಯು.ಆರ್. ರಾವ್ ಹಾಲ್‌ನಲ್ಲಿ ಏಪ್ರಿಲ್ 27ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.

ರಕ್ತದಾನ ಮಾಡಲು ಆಸಕ್ತರು ದೂ. +91 99160 35618 ಸಂಖ್ಯೆಯನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.

Exit mobile version