Site icon Ullalavani

ಯಕ್ಷಧ್ರುವ ಪಟ್ಲ ಫೌಂಡೇಷನ್‌ನಿoದ ವಿದ್ಯಾರ್ಥಿ ವೇತನ; ಅರ್ಹರು ಅರ್ಜಿ ಸಲ್ಲಿಸಲು ಪ್ರಕಟಣೆ

ಮಂಗಳೂರು: ಅಡ್ಯಾರ್ ಗಾರ್ಡನ್‌ನಲ್ಲಿ ಮೇ 30ರಂದು ನಡೆಯಲಿರುವ ‘ಪಟ್ಲ ಸಂಭ್ರಮ-2026’ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುವುದು.

ಅರ್ಹ ವಿದ್ಯಾರ್ಥಿಗಳು ಭಾವಚಿತ್ರ, ಬಿಪಿಎಲ್ ಕಾರ್ಡ್ ಪ್ರತಿ, ಅಂಕಪಟ್ಟಿಯೊoದಿಗೆ ಮೇ 15ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದವರು ಮೇ 30ರಂದು ಬೆಳಿಗ್ಗೆ 9 ಗಂಟೆಗೆ ಹಾಜರಿರಬೇಕು. ಅರ್ಜಿಯನ್ನು ಸುದೇಶ್ ಕುಮಾರ್ ರೈ, 2ನೇ ಮಹಡಿ, ಎಂಪೈರ್ ಮಾಲ್ (ಅಂಗಡಿ ಸಂಖ್ಯೆ 16 ಮತ್ತು 17), ಎಂ.ಜಿ.ರಸ್ತೆ, ಮಂಗಳೂರು -575003 ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Exit mobile version