ಉಳ್ಳಾಲ: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ಶಿಲ್ಪಿ, ಉಚಿತ ವಿದ್ಯಾಭ್ಯಾಸ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನುಂಟುಮಾಡಿದ, ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅವರ ಏಳನೇ ವರ್ಷದ ಅನುಸ್ಮರಣೆ, ಪ್ರಾರ್ಥನಾ ಸಂಗಮ, (ಆಂಡ್ ನೇರ್ಚೆ) ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಅಲ್ ಮದೀನ ಮಂಜನಾಡಿ ಕ್ಯಾಂಪಸ್ ನಲ್ಲಿ , ಮೇ 13 , 14 ದ್ವಿದಿನಗಳಲ್ಲಿ ನಡೆಯಲಿದೆ ಎಂದು ಕನ್ವಿನರ್ ಕೆಎಮ್ ಕೆ ಮಂಜನಾಡಿ ಹೇಳಿದರು.
ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಮೇ 13 ಬುಧವಾರ ಬೆಳಿಗ್ಗೆ ಆರು ಗಂಟೆಗೆ ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಲ್ಹರ್ ರವರ ನೇತೃತ್ವದಲ್ಲಿ ಖತಮುಲ್ ಕುರ್ ಆನ್ ಮತ್ತು ಮೌಲಿದ್ ಮಜ್ಲಿಸ್ ನಡೆಯಲಿದೆ. ಅದೇ ದಿನ ರಾತ್ರಿ 7ಕ್ಕೆ ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಲ್ ರವರ ನೇತೃತ್ವದಲ್ಲಿ ಜಲಾಲಿಯಾ ಮಜ್ಲಿಸ್ ನಡೆಯಲಿದೆ.
ಮೇ 14ನೇ ಗುರುವಾರ ಸಂಜೆ 4 ಗಂಟೆಗೆ ಅನಿವಾಸೀ ಭಾರತೀಯರ ಸ್ನೇಹ ಸಂಗಮ, ಗಲ್ಫ್ ಮೀಟ್ ನಡೆಯಲಿದೆ.. ಅದೇ ದಿನ ರಾತ್ರಿ ಮಗ್ರಿಬ್ ನಮಾಜಿನ ನಂತರ ಅಲ್ ಮದಿನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾವೇಶ ನಡೆಯಲಿದೆ.
ಯೆನಪೋಯ ವಿವಿ ಕುಲಪತಿ ಹಾಜಿ ಯೇನೆಪೋಯ ಅಬ್ದುಲ್ಲ ಕುಂಞಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸಯ್ಯಿದ್ ಮಸೂದ್ ತಂಙಳ್ ಕೂರತ್ ದುಆ ನಡೆಸುವರು. ನೌಫಲ್ ಸಖಾಪಿ ಕಳಸ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಸಮಾರೋಪ ಭಾಷಣ ಮಾಡಲಿದ್ದಾರೆ. ನೂರುಸ್ಸಾದಾತ್ ಸಯ್ಯಿದ್ ಬಾಯಾರ್ ತಂಙಳ್ ಸಮಾರೋಪ ದುಆ ನೆರವೇರಿಸಲಿದ್ದಾರೆ.ಝೈನುಲ್ ಉಲಮಾ ಮಾಣಿ ಉಸ್ತಾದ್, ಸ್ಪೀಕರ್ ಹಾಜಿ ಯು ಟಿ ಖಾದರ್ ಫರೀದ್, ಸಯ್ಯಿದ್ ಇಸ್ಮಾಯಿಲ್ ತಂಙಳ್ ಅಲ್ ಹಾದೀ ಉಜಿರೆ, ಡಾ . ಮುಹಮ್ಮದ್ ಮುಹಮ್ಮದ್ ಫಾಝಿಲ್ ರಝ್ವಿ, ಡಾ. ಇಫ್ತಿಕರ್ ಫರೀದ್ ಭಾಗವಹಿಸಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಚೆಯರ್ಮಾನ್ ಹಾಜಿ ಎನ್ ಎಸ್ ಕರೀಂ, ಮುಹಮ್ಮದ್ ಕುಂಞಿ ಅಮ್ಜದಿ, ಅಬ್ದುಲ್ ರಹ್ಮಾನ್ ಮದನಿ ನೆಕ್ಕರೆ, ಅಬ್ದುಲ್ ರಝಾಕ್ ಮಾಸ್ಟರ್ ಉಪಸ್ಥಿತರಿದ್ದರು