Site icon Ullalavani

ಬದ್ರಿಯಾ ವೆಲ್ಫೇರ್ ಸೊಸೈಟಿ ಅಜ್ಜಿನಡ್ಕ (ರಿ) ಇದರ 40 ನೇ ವಾರ್ಷಿಕದ ಅಂಗವಾಗಿ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ

ಕೋಟೆಕಾರ್: ಬದ್ರಿಯಾ ವೆಲ್ಫೇರ್ ಸೊಸೈಟಿ ಅಜ್ಜಿನಡ್ಕ ಇದರ 40 ನೇ ವಾರ್ಷಿಕದ ಅಂಗವಾಗಿ ಫಾದರ್ ಮಲ್ಲರ್ ಆಸ್ಪತ್ರೆ, ಕಂಕನಾಡಿ ಹಾಗೂ ಏನಫೋಯ ಮೆಡಿಕಲ್ ಕಾಲೇಜ್ ಮತ್ತು ಬ್ಲಡ್ ಡೋನರ್ಸ್ (ರಿ), ಮಂಗಳೂರು ಇವರ ಸಹಯೋಗದಲ್ಲಿ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ ಮೇ 10 ರವಿವಾರ ಬೆಳಿಗ್ಗೆ, 9 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ದ ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಹಲವಾರು ಮಂದಿ ರಕ್ತದಾನ ಮಾಡಿದರು ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಂಡರು.

ಅಧ್ಯಕ್ಷತೆ ವಹಿಸಿದ ಬದ್ರಿಯಾ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ಮಾತನಾಡಿದರು. ಬಂಟ್ವಾಳ ಸರ್ಕಾರಿ ಕಾಲೇಜಿನ ಉಪನ್ಯಾಸಕ ಎಸ್.ಎಂ.ಅಹ್ಮದ್, ಸಮಾಜ ಸೇವಕರಾದ ಇಬ್ರಾಹಿಂ ಕೊಮರಂಗಳ, ಯುಬಿಎಂ ರಹೀಮ್ ಉಚ್ಚಿಲ್, ಅಜ್ಜಿನಡ್ಕ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಸುಲೈಮಾನ್, ಕೋಟೆಕಾರ್ ಪಟ್ಟಣ ಪಂಚಾಯಿತಿ ಕೌನ್ಸಿಲರ್ ಅಹ್ಮದ್ ಬಾವ ಅಜ್ಜಿನಡ್ಕ, ಇಸ್ಹಾಕ್, ಬದ್ರಿಯಾ ವೆಲ್ಫೇರ್ ಸೊಸೈಟಿ ಉಪಾಧ್ಯಕ್ಷ ಇಸ್ಮಾಯಿಲ್ ಸಿ.ಎಚ್., ರಕ್ತದಾನಿ ಅರ್ಷದ್ ಮೊದಲಾದವರು ಉಪಸ್ಥಿತರಿದ್ದರು.


ಸೊಸೈಟಿಯ ಪ್ರ.ಕಾ. ಸುಲೈಮಾನ್ ಬಾತಿಷ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಹನೀಫ್ ಎಸ್ ಬಿ ಕಾರ್ಯಕ್ರಮ ನಿರೂಪಿಸಿದರು,

Exit mobile version