ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ) ಉಳ್ಳಾಲ ಇದರ ವತಿಯಿಂದ ಮೇ 24ರಂದು ನಡೆಯುವ “ದತ್ತು ಸ್ವೀಕಾರ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವೇದಿಕೆಯ ಗೌರವ ಅಧ್ಯಕ್ಷರಾದ ಏ ಜೆ ಶೇಖರ್ ಬಿಡುಗಡೆ ಗೊಳಿಸಿದರು.
ವೇದಿಕೆಯ ಅಧ್ಯಕ್ಷರಾದ ಕೆ ಟಿ ಸುವರ್ಣ ಉಪಸ್ಥಿತರಿದ್ದರು. ಜೊತೆಗೆ ಕಾರ್ಯಾಧ್ಯಕ್ಷರು ಸತೀಶ್ ಕರ್ಕೇರಾ, ಪ್ರಧಾನ ಕಾರ್ಯದರ್ಶಿ ಆನಂದ್ ಅಸ್ಸೈಗೋಳಿ, ಕೋಶಾಧಿಕಾರಿ ಲಕ್ಷ್ಮಣ್ ಪೂಜಾರಿ, ಉಪಾಧ್ಯಕ್ಷರು ಹರೀಶ್ ಮುಂಡೋಲಿ, ಸಂಘಟನಾ ಕಾರ್ಯದರ್ಶಿಗಳಾದ ಹರೀಶ್ ಅಂಬ್ಲ ಮೊಗೇರ,ಭಗವಾನ್ ದಾಸ್, ಸುರೇಶ್ ಪಾಂಡವರ ಕಲ್ಲು, ಪ್ರವೀಣ್ ನೆರಿಯ, ಜಗದೀಶ್ ಕೆರೆಬೈಲ್, ರಾಜೇಶ್ ಯು ಬಿ ಕೆರೆಬೈಲ್,ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು ವಲಯದ ಅಧ್ಯಕ್ಷರು ಲೋಕೇಶ್ ಪೂಜಾರಿ,ಬೆಳ್ಮ ಬಿಲ್ಲವ ಸಂಘದ ಗೌರವ ಅಧ್ಯಕ್ಷರು ರಾಜೀವ ಮಾಸ್ಟರ್, ಗ್ರಾಮ ಚಾವಡಿ ಯುವ ವಾಹಿನಿ ಪ್ರಮುಖರು ಅಜಿತ್ ಪಜೀರ್, ಗ್ರಾಮ ಚಾವಡಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರು ಸುಭಾಸ್ ಬೋಳಿಯಾರ್, ದೇರಳಕಟ್ಟೆ ಬಿರುವೆರ್ ಕುಡ್ಲ ಸಂಘದ ಗೌರವ ಅಧ್ಯಕ್ಷರು ಪುರುಷೋತ್ತಮ ಅಂಚನ್, ತಲಪಾಡಿ ಬಿಲ್ಲವ ಸಂಘದ ಪ್ರಮುಖರು ಚಂದ್ರಹಾಸ ಪೂಜಾರಿ,ಮಂಜನಾಡಿ ಬಿಲ್ಲವ ಸಂಘದ ಅಧ್ಯಕ್ಷರು ರಾಜೀವ ಪೂಜಾರಿ ಬಟ್ಯಡ್ಕ, ಹರೀಶ್ ಪೂಜಾರಿ, ವಿವೇಕಾನಂದ ಒಂಬತ್ತುಕೆರೆ , ಜಯಂತ್ ಕಾಪಿಕಾಡ್, ರಾಕೇಶ್ ಬೈಪಾಸ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.