ಮಂಗಳೂರು ಮಂಡಲದ ವತಿಯಿಂದ ಪಂಚ ರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಪಕ್ಷವು ಪ್ರಚಂಡ ಬಹುಮತದಿಂದ ಜಯ ಭಾರಿಸಿದ ಪ್ರಯುಕ್ತ ಮುಡಿಪು, ಕಂಬ್ಳಪದವಿನ ಶ್ರೀ ದುರ್ಗಾಕಾಳಿ ದೇವಸ್ಥಾನದ ವಠಾರದಲ್ಲಿ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್ ರವರ ಅಧ್ಯಕ್ಷತೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ರವರು ಪಕ್ಷದ ಪ್ರಮುಖರನ್ನು ಉದ್ದೇಶಿಸಿ ಪಕ್ಷ ಪ್ರಚಂಡ ಬಹುಮತದಿಂದ ವಿಜಯಿಯಾಗಲು ರಾತ್ರಿ ಹಗಲು ಶ್ರಮಪಟ್ಟು ದುಡಿದ ಕಾರ್ಯಕರ್ತರಿಗೆ ಹಾಗೂ ಮತಧಾರ ಬಾಂಧವರಿಗೆ ಅಭಿನಂದನೆ ಸಲ್ಲಿಸಿದರು.
ಮಂಡಲ ಪ್ರಭಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಪೂಜಾ ಪೈ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆಆರ್, ದಯಾನಂದ ತೊಕ್ಕೋಟ್ಟು, ಆತ್ಮ ನಿರ್ಭರ ಭಾರತ್ ಇದರ ಜಿಲ್ಲಾ ಸಂಯೋಜಕರಾದ ಜಯಶ್ರೀ ಕರ್ಕೇರ, ಮಂಡಲ ಉಪಾಧ್ಯಕ್ಷರುಗಳಾದ ಸುಮನ ಹರೀಶ್ ಶೆಟ್ಟಿ, ಯಶವಂತ್ ದೇರಾಜೆ, ಹುಕ್ರಪ್ಪ ನಾಯ್ಕ, ಮಂಡಲ ಕಾರ್ಯದರ್ಶಿ ಗಳಾದ ಕಿಶೋರ್ ಕುತ್ತಾರ್, ಸುರೇಖಾ ಮುನ್ನೂರು, ಮಂಡಲ ಕಾರ್ಯಾಲಯ ಕಾರ್ಯದರ್ಶಿ ಸುಜಾತಾ ಬಿ ಶೆಟ್ಟಿ, ಜಿಲ್ಲಾ ಮಾಧ್ಯಮ ಪ್ರಮುಖರಾದ ಹೇಮಂತ್ ಶೆಟ್ಟಿ ದೇರಳಕಟ್ಟೆ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸಿರಾಜುದ್ದೀನ್ ಮುಡಿಪು, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷರಾದ ಸಿದ್ದಿಕ್ ತಲಪಾಡಿ, ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ, ಮಂಡಲ ರೈತ ಮೋರ್ಚಾ ಅಧ್ಯಕ್ಷರಾದ ಪದ್ಮನಾಭ ಗಟ್ಟಿ, ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಮುರಳಿಧರ ಕೊಣಾಜೆ, ಪ್ರಧಾನ ಕಾರ್ಯದರ್ಶಿ ಶರಣ್ ಶೆಟ್ಟಿ, ಸೋಮೇಶ್ವರ ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ, ಮಂಜನಾಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ನಿತ್ಯಾನಂದ ಭಂಡಾರಿ, ಸೋಮೇಶ್ವರ ಮಹಾ ಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಅರುಣ್ ಬೀರಿ, ಶಿಕ್ಷಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕರದ ವಸಂತ ಕೋಡಿ, ವೃತ್ತಿಪರ ಪ್ರಕೋಷ್ಠದ ಜಿಲ್ಲಾ ಸಹಸಂಚಾಲಕರಾದ ಸುಕೇಶ್ ಭಂಡಾರಿ, ಪ್ರಮುಖರಾದ ಹರೀಶ್ ಕುಂಪಲ, ಶಕ್ತಿ ಕೇಂದ್ರ ಪ್ರಮುಖರಾದ ನಿತಿನ್ ಪೂಜಾರಿ, ಶರತ್ ಶೆಟ್ಟಿ, ದಾಮೋದರ ಆಚಾರ್ಯ, ರವಿಶಂಕರ್ ಭಟ್, ಪಾರ್ಥ ಸಾರಥಿ ಕಿನ್ಯ ಹಾಗೂ ಪ್ರಮುಖರು ಮೊದಲಾದವರು ಉಪಸ್ಥಿತರಿದ್ದರು.