Site icon Ullalavani

ಅಲ್ಪಕಾಲದ ಅಸೌಖ್ಯದಿಂದ ನಜಾತ್ ಮುಹಮ್ಮದ್ ಹಾಜಿ (87) ನಿಧನ…!!


ಉಳ್ಳಾಲ : ಮುಕ್ಕಚೇರಿ ನಿವಾಸಿ ‘ನಜಾತ ಮುಹಮ್ಮದ್ ಹಾಜಿ’ ಯವರು ಅಲ್ಪಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ನಿಧನರಾದರು.


ಪ್ರಮುಖ ವ್ಯಾಪಾರಸ್ಥರು ಮತ್ತು ಧಾರ್ಮಿಕ ಸಂಸ್ಥೆಗಳ ಮುಂಚೂಣಿ ನಾಯಕರೂ ಆಗಿದ್ದ ಅವರು ಇಬ್ಬರು ಪುತ್ರರು, ಐದು ಮಂದಿ ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


ಸಂತಾಪ: ಕಾಂಗ್ರೆಸ್ ರಾಜ್ಯ ಸಮಿತಿ ಸಂಯೋಜಕ ಫಾರೂಕ್ ಉಳ್ಳಾಲ್,ಉಳ್ಳಾಲ ದರ್ಗಾ ಮಾಜೀ ಅಧ್ಯಕ್ಷ ಅಬ್ದುಲ್ ರಶೀದ್, ಮೇಲಂಗಡಿ ಹೊಸ ಪಳ್ಳಿ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ,ಮಾಜಿ ನಗರ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮುಕ್ಕಚೇರಿ, ಕೌನ್ಸಿಲರ್ ಗಳಾದ ಅಶ್ರಫ್, ಖಲೀಲ್, ಜಬ್ಬಾರ್ ಸಂತಾಪ ಸೂಚಿಸಿದ್ದಾರೆ.

Exit mobile version