Site icon Ullalavani

ಉಳ್ಳಾಲ ಪುರಸಭೆ ಮಾಜಿ ಉಪಾಧ್ಯಕ್ಷೆ ಭವಾನಿ ನಿಧನ

ಉಳ್ಳಾಲ: ಉಳ್ಳಾಲ ಪುರಸಭೆಗೆ ಎರಡು ಬಾರಿ ಕಾಪಿಕಾಡು ವಾರ್ಡಿನಿಂದ ಸ್ಪರ್ಧಿಸಿ ಕೌನ್ಸಿಲರ್ ಆಗಿದ್ದ ಭವಾನಿ (70) ಇವರು ಅಲ್ಪಕಾಲದ ಅಸೌಖ್ಯದಿಂದ ನಗರದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿಯಾದ ಭವಾನಿ ಇವರು ಅವಿವಾಹಿತರಾಗಿದ್ದು , ಬಿಜೆಪಿ ಸಕ್ರಿಯ ಮಹಿಳಾ ಸದಸ್ಯೆಯಾಗಿದ್ದರು. ಪುಲ್ಕೆದಡಿ ಆದಿ ಕ್ಷೇತ್ರ ಬಂಡಿಕೊಟ್ಯ ಕೋರ್ದಬ್ಬು ದೈವಸ್ಥಾನದ ಸಮಿತಿಯಲ್ಲಿ ಸಕ್ರಿಯ ಸದಸ್ಯೆಯಾಗಿದ್ದರು. ಉಳ್ಳಾಲ ಪುರಸಭೆ ಗೆ ಎರಡು ಬಾರಿ ಕೌನ್ಸಿಲರ್ ಆಗಿ ಆಯ್ಕೆಗೊಂಡು ಒಂದು ಬಾರಿ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದರು.

Exit mobile version