Site icon Ullalavani

ಮೇ.06 ; ‘ಕನಕ ಸ್ಮೃತಿ’ – 16 ಗಾಯಕರು ಮತ್ತು 6 ತಂಡಗಳಿಗೆ ಕನಕ ಪುರಸ್ಕಾರ

ಮಂಗಳಗಂಗೋತ್ರಿ : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಪೀಠ ಮತ್ತು ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ‘ಕನಕ ಸ್ಮೃತಿ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಕನಕ ಪುರಸ್ಕಾರ ಪ್ರದಾನ ಸಮಾರಂಭವು ಮೇ 06, ಬುಧವಾರ, ಅಪರಾಹ್ನ 2.30 ಗಂಟೆಗೆ ಮಂಗಳಗಂಗೋತ್ರಿಯ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಬಿ.ಎ. ವಿವೇಕ ರೈ ವಿಚಾರ ವೇದಿಕೆಯಲ್ಲಿ ನಡೆಯಲಿದೆ.

 
ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್‌ ಧರ್ಮ ಇವರು ವಹಿಸಲಿದ್ದಾರೆ, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹ ನಿರ್ದೇಶಕರಾದ ಡಾ. ಬಿ.ಎಸ್.‌ ಅನಿಲಕುಮಾರ ಬೊಮ್ಮಾಘಟ್ಟ ಇವರು ವಿಶೇಷ ಉಪನ್ಯಾಸ ನೀಡಲಿರುವರು. ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನಾಗಪ್ಪ ಗೌಡ .ಆರ್,   ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ ಧನಂಜಯ ಕುಂಬ್ಳೆ ಉಪಸ್ಥಿತರಿರುವರು.  ಈ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ 16  ಅಭ್ಯರ್ಥಿಗಳಿಗೆ ಮತ್ತು  ಆರು  ತಂಡಗಳಿಗೆ ‘ಕನಕ ಪುರಸ್ಕಾರ ಪ್ರದಾನ ಮತ್ತು ಕನಕ ಕೀರ್ತನ  ಪ್ರಸ್ತುತಿ’  ನಡೆಯಲಿದೆ ಎಂದು  ಕನಕದಾಸ ಸಂಶೋಧನ ಕೇಂದ್ರದ ಪ್ರಕಟಣೆ ತಿಳಿಸಿದೆ.

Exit mobile version