Site icon Ullalavani

ಮೇ.9; ಕಿಂಗ್‌ಸ್ಟಾರ್ ಸೇವಾಸಮಿತಿ ಮಂಗಳೂರು ಇದರ ನೂತನ ಕಚೇರಿ ಉದ್ಘಾಟನೆ

ಮಂಗಳೂರು, ಮೇ 4: ಕಿಂಗ್‌ಸ್ಟಾರ್ ಸೇವಾಸಮಿತಿ (ರಿ.), ಉಳಿಯ-ಹೊಯ್ಗೆ ಪೆರ್ಮನ್ನೂರು ವ್ಯಾಪ್ತಿಯ ಸಮಾಜಸೇವಾ ಸಂಘಟನೆ, ತನ್ನ ನೂತನ ಕಛೇರಿಯ ಉದ್ಘಾಟನೆಯನ್ನು ಮೇ 9, 2026ರಂದು ಶನಿವಾರ ಬೆಳಿಗ್ಗೆ 8:30ಕ್ಕೆ ಉಳಿಯ ಹೊಯ್ಗೆ ಇರುವ ಕಿಂಗ್‌ಸ್ಟಾರ್ ರಿವರ್ ವ್ಯೂವ್‌ನಲ್ಲಿ ಆಯೋಜಿಸಿದೆ.

ಈ ಉದ್ಘಾಟನಾ ಸಮಾರಂಭವನ್ನು ಸಂತ ಸೆಬಾಸ್ಟಿಯನ್ ಚರ್ಚ್, ಪೆರ್ಮನ್ನೂರು ಧರ್ಮಗುರು ರೆವ್. ಫಾ. ಸಿಪ್ರಿಯನ್ ಪಿಂಟೊ ಅವರು ನೆರವೇರಿಸಲಿದ್ದು, ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ವ್ಯವಸ್ಥಾಪನಾ ಅಧ್ಯಕ್ಷರಾದ ರಾಜೇಶ್ ಉಳಿಯ ಹಾಗೂ ಉಳ್ಳಾಲ ದರ್ಗಾದ ಪರಿಚಾರಕರಾದ ಸಯ್ಯದ್ ಸದಕತುಲ್ಲಾ ತಂಜಳ್ ಅವರು ಉಪಸ್ಥಿತರಿರುವರು.

ಮೇ 10, 2026ರಂದು ಭಾನುವಾರ ಸಂಜೆ 7:00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾದ ಯು.ಟಿ. ಖಾದರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಯು.ಟಿ. ಇಫ್ತಿಕರ್ ಅಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಉಳ್ಳಾಲ ಪೋಲೀಸ್ ಠಾಣೆಯ ನಿರೀಕ್ಷಕರಾದ ವಿರೂಪಾಕ್ಷ ಸ್ವಾಮಿ, ದ್ವೀಪಗಳ ಉಳಿಸಿ ಹೋರಾಟ ಸಮಿತಿಯ ಸಂಚಾಲಕರಾದ ಸುನೀಲ್ ಕುಮಾರ್ ಬಜಾಲ್, ಖ್ಯಾತ ಪರಿಸರವಾದಿ ಜೀತ್ ಮಿಲನ್ ರೋಚ್, ಸಂತ ಸೆಬಾಸ್ಟಿಯನ್ ಚರ್ಚ್ ಕಾರ್ಯದರ್ಶಿ ಜ್ಯೋತಿ ಡಿಸೋಜ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಇದೇ ವೇಳೆ ನೇತ್ರಾವತಿ ಮೀನುಗಾರರ ಸಂಘದ ಅಧ್ಯಕ್ಷರಾದ ಫ್ರಾನ್ಸಿಸ್ ಪಿಂಟೊ, ಧಾರ್ಮಿಕ ಪರಿಷತ್ತು ಸದಸ್ಯರಾದ ಸುರೇಶ್ ಭಟ್ನಗರ್, ಕೌನ್ಸಿಲರ್ ವೀಣಾ ಶಾಂತಿ ಡಿಸೋಜ, ಪರಿಸರ ಸಂರಕ್ಷಣಾ ಸಮಿತಿ ಸಂಚಾಲಕರಾದ ಲೋಯ್ಡ್ ರಾಯಲ್ ಡಿಸೋಜ ಹಾಗೂ ಉಳ್ಳಾಲ ನಾಗರಿಕ ವೇದಿಕೆಯ ಕಾರ್ಯದರ್ಶಿ ನವೀನ್ ನಾಯಕ್ ಉಪಸ್ಥಿತರಿರುವರು.

ಸಭೆಯಲ್ಲಿ ಪ್ರಾರ್ಥನೆ, ಸ್ವಾಗತ, ಸನ್ಮಾನ, ಲಕ್ಕಿಡಿಪ್ ಡ್ರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮವನ್ನು ಮಂಗಳೂರಿನ ರಿಯಾಜ್ ಅವರು ನಿರೂಪಿಸಲಿದ್ದಾರೆ.

Exit mobile version