Site icon Ullalavani

ಟಿವಿಕೆ ಭಾರೀ ಮುನ್ನಡೆ: ನಟ ವಿಜಯ್‌ಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ. 04: ತಮಿಳುನಾಡಿನ ಮತ ಎಣಿಕೆಯಲ್ಲಿ ಟಿವಿಕೆ ಭಾರೀ ಮುನ್ನಡೆ ಸಾಧಿಸಿದ್ದು, ಪಕ್ಷದ ಮುಖ್ಯಸ್ಥ ನಟ ದಳಪತಿ ವಿಜಯ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಮದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಇರಬಹುದು. ಇನ್ನೂ ಟಿವಿಕೆ ಹೊಸ ಪಕ್ಷ ವಿಜಯ್ ಅಲೆಯಿಂದ ಮುನ್ನಡೆ ಸಾಧಿಸಿರಬಹುದು ಎಂದ ಅವರು ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದರು.”ಪಶ್ಚಿಮ ಬಂಗಾಳದಲ್ಲಿ ನಮ್ಮದೇನು ಇರಲಿಲ್ಲ. ಅಲ್ಲಿ ಬಿಜೆಪಿ ಮುನ್ನಡೆಗೆ ಆಡಳಿತ ವಿರೋಧಿ ಅಲೆ ಇರಬಹುದು. ಅಸ್ಸಾಂನ ಸೋಲನ್ನು ಒಪ್ಪುತ್ತೇವೆ. ಇನ್ನೂ ಕೇರಳದಲ್ಲಿ ನಮ್ಮ ನಿರೀಕ್ಷೆ ಮೀರಿ ಮುನ್ನಡೆ ಗಳಿಸಿದ್ದೇವೆ” ಎಂದು ಹೇಳಿದರು.

Exit mobile version