Site icon Ullalavani

ಮೀಟರ್ ಬಡ್ಡಿ: ಪ್ರಕರಣ ದಾಖಲು

ಉಳ್ಳಾಲ: ಹೆಚ್ಚುವರಿ ಬಡ್ಡಿ ನೀಡಲು ಪೀಡಿಸುತ್ತಿದ್ದ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದಾತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೋಮೇಶ್ವರ ನಿವಾಸಿ ಜೀತು ಪೂಜಾರಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲ ತಿಂಗಳ ಹಿಂದೆ ಕುಂಪಲ ನಿವಾಸಿ ಹರೀಶ್ ಎಂಬವರು ಜೀತು ಪೂಜಾರಿ ಕೈಯಿಂದ ರೂ. 5 ಲಕ್ಷ ಹಣವನ್ನು ಬಡ್ಡಿಸಾಲದ ರೂಪದಲ್ಲಿ ಪಡೆದುಕೊಂಡಿದ್ದರು. ಅದರ ಅಸಲು ಹಣ ಮತ್ತು ಬಡ್ಡಿಯಾಗಿ ರೂ. 2 ಲಕ್ಷ ನಗದನ್ನು ಹರೀಶ್ ವಾಪಸ್ಸು ಮಾಡಿದ್ದರು. ಆದರೆ ಹೆಚ್ಚುವರಿ ಬಡ್ಡಿ ನೀಡಬೇಕೆಂದು ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ಜೀತುಪೂಜಾರಿ ನಿಂದಿಸಿ ಬೆದರಿಕೆ ಒಡ್ಡುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಹರೀಶ್ ಅವರು ಉಳ್ಳಾಲ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Exit mobile version