ಮಂಗಳೂರು, ಮೇ 4: ಮಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಲರ್ನಿಂಗ್‌ನ ಆರು ಮಂದಿ ವಿದ್ಯಾರ್ಥಿಗಳು ಮೇ-ಜೂನ್ ಪರೀಕ್ಷಾ ಅವಧಿಯಲ್ಲಿ ನಡೆದ ಯುಎಸ್ ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆAಟ್ (ಸಿಎಂಎ) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಏಪ್ರಿಲ್ 14ರಂದು ಫಲಿತಾಂಶ ಪ್ರಕಟವಾಗಿದ್ದು, ಇದು ಸಂಸ್ಥೆಗೆ ಗಮನಾರ್ಹ ಶೈಕ್ಷಣಿಕ ಸಾಧನೆಯಾಗಿದೆ.
ಅಮೃತ್ ಸಿ ಶೆಟ್ಟಿ, ಸ್ಥಿತಿ ಜೆ ಶೆಟ್ಟಿ, ಮೇಘಶ್ರೀ ಕೆ ಪೂಜಾರಿ, ಪ್ರಾರ್ಥನಾ ಪ್ರಭು, ನೀಷ್ಮಾ ಹಾಗೂ ಪ್ರಿಯಾಂಕಾ ಚೌಧರಿ ಯಶಸ್ವಿಯಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ.
ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಕೌಂಟೆoಟ್ಸ್ ವತಿಯಿಂದ ನೀಡಲಾಗುವ ಯುಎಸ್ ಸಿಎಂಎ ಅರ್ಹತೆಯು ಹಣಕಾಸು ನಿರ್ವಹಣೆ ಹಾಗೂ ಕಾರ್ಯತಂತ್ರದ ಲೆಕ್ಕಪತ್ರ ನಿರ್ವಹಣೆಯಲ್ಲಿ ಜಾಗತಿಕವಾಗಿ ಮಾನ್ಯತೆ ಪಡೆದ ಅರ್ಹತೆಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆ ಅಭಿನಂದನೆ ಸಲ್ಲಿಸಿದ್ದು, ಅವರ ಮುಂದಿನ ವೃತ್ತಿಪರ ಜೀವನದಲ್ಲಿ ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಶುಭಹಾರೈಸಿದೆ.