Site icon Ullalavani

ಎಸ್ ವೈ ಎಸ್ ಹಿದಾಯತ್ ನಗರ ಶಾಖೆ ನೂತನ ಪಧಾಧಿಕಾರಿಗಳ ಆಯ್ಕೆ

ಕೋಟೆಕಾರ್: ಎಸ್‌ವೈಎಸ್ ಹಿದಾಯತ್ ನಗರ ಶಾಖೆಯ ವಾರ್ಷಿಕ ಮಹಾಸಭೆ ಹಿದಾಯತ್ ನಗರ ಮದರಸ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ವೀಕ್ಷಕರಾಗಿ ಬಶೀರ್ ಆಹ್ಸನಿ ಉಸ್ತಾದ್ ಆಗಮಿಸಿ ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ 2025-26ನೇ ಸಾಲಿನ ಸಮಿತಿಯನ್ನು ಬರ್ಕಸ್‌ಗೊಳಿಸಿ, ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಬಶೀರ್ ಅಹ್ಸನಿ ತೋಡಾರ್, ಉಪಾಧ್ಯಕ್ಷರಾಗಿ ಸಿದ್ದೀಕ್ ಟಿ.ಎಚ್. ಹಾಗೂ ಅಝೀಝ್ ಪಂಜಲ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎ. ಅಜ್ಜಿನಡ್ಕ, ಕೋಶಾಧಿಕಾರಿಯಾಗಿ ಶಬೀರ್ ಆಶ್ಅರಿ, ದಅ್ವಾ ಕಾರ್ಯದರ್ಶಿಯಾಗಿ ಝುಬೈರ್ ಝುಹ್ರಿ ಆಯ್ಕೆಯಾಗಿದ್ದಾರೆ.

ಇದಲ್ಲದೆ, ಸಾಂತ್ವನ ವಿಭಾಗಕ್ಕೆ ಇಸಾಬ್ ಮುನೀರ್ ಉಳ್ಳಾಲ, ಅಬ್ದುಲ್ ಫಲೂಲ್ ಮತ್ತು ಸಮದ್ ಅವರನ್ನು ಆಯ್ಕೆ ಮಾಡಲಾಗಿದ್ದು, ಸದಸ್ಯರಾಗಿ ಅಬ್ದುಲ್ ಬಶೀರ್, ಫಾರೂಕ್ ಉಳ್ಳಾಲ್, ಮೊಹಮ್ಮದ್ ಬಶೀರ್ ಮತ್ತು ಸಿರಾಜ್ ಆಯ್ಕೆಯಾಗಿದ್ದಾರೆ.

ಸಭೆಯನ್ನು ಪ್ರಧಾನ ಕಾರ್ಯದರ್ಶಿ ಮುನೀರ್ ಸ್ವಾಗತಿಸಿ, ಜಿ.ಎ. ವಂದಿಸಿದರು. ಸ್ವಲಾತ್‌ನೊಂದಿಗೆ ಕಾರ್ಯಕ್ರಮವನ್ನು ಸಮಾಪಿಸಲಾಯಿತು.

Exit mobile version