ಉಳ್ಳಾಲ ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ ಸ್ವಪ್ನ ಹರೀಶ್ ಅವರ ತಾಯಿ ದೇವಕಿ ಕೇಪು ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಸ್ವಪ್ನ ಅವರ ವಿಟ್ಲ ಸಮೀಪದ ಕೇಪು ನಿವಾಸಕ್ಕೆ ಭೇಟಿ ಸಂತಾಪ ಸೂಚಿಸಿ, ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸ್ವಪ್ನ ಅವರ ಸಹೋದರರು ಹಾಗೂ ಸಹೋದರಿಯರು, ಕೇಪು ಗ್ರಾಮ ಪಂಚಾಯತ್ ಸದಸ್ಯ ಕೆರೀಂ ಕುದ್ದುಪದವು, ವಿಟ್ಲ ಪಟ್ಟಣ ಪಂಚಾಯತ್‌ನ ನಾಮ ನಿರ್ದೇಶಿತ ಸದಸ್ಯ ಮುಹಮ್ಮದ್ ಇಕ್ಬಾಲ್ ಹಾನೆಸ್ಟ್, ಉದ್ಯಮಿ ಮನ್ಸೂರ್ ಖಾದರ್ ಹಾನೆಸ್ಟ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕ್ಕರ್ ಅನಿಲಕಟ್ಟೆ ಉಪಸ್ಥಿತರಿದ್ದರು.