Site icon Ullalavani

ಉಳ್ಳಾಲ-ಕುತ್ತಾರ್ ಸೇರಿ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ

ಉಳ್ಳಾಲ: 110ಕೆವಿ ಕೆಪಿಟಿಸಿಎಲ್ ಜೆಪ್ಪು ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಏಪ್ರಿಲ್ 28ರಂದು ಉಳ್ಳಾಲ, ಕುತ್ತಾರ್ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಉಳ್ಳಾಲ ವ್ಯಾಪ್ತಿಯ ಮಸ್ತಿಕಟ್ಟೆ, ಅಬ್ಬಕ್ಕ ಸರ್ಕಲ್, ಸುಂದರ್ ಭಾಗ್, ಸುಮ್ಮರ್ಸ್ ಸ್ಯಾಂಡ್, ಮುಕ್ಕಚೇರಿ, ಕ್ಯಾಲಿಕೋ, ಹಿಲೇರಿಯಾ ನಗರ, ಸುಭಾಷ್ ನಗರ, ಹೈಡ್ರಾಲ್ ನಗರ, ಸುಲ್ತಾನ್ ನಗರ, ಬಾಬು ಕಂಪೌoಡ್ ಪ್ರದೇಶಗಳು ಇದರಲ್ಲಿ ಸೇರಿವೆ.

ಕುತ್ತಾರ್ ಪ್ರದೇಶದ ಬಬ್ಬುಕಟ್ಟೆ, ಹಿರಾ ನಗರ, ನಿಟ್ಟಿಕಡಾರ್ ನಗರ, ಪ್ರಕಾಶ್ ನಗರ, ಪಂಡಿತ್ ಹೌಸ್, ಶಿವಾಜಿ ನಗರ, ಮುಂಡೋಳಿ, ಸೆವಂತಿ ಗುಡ್ಡೆ, ಹೊಸಗದ್ದೆ, ತಾರಿಪದ್ಪು, ದರೈಂದಬಾಗಿಲು ಪ್ರದೇಶಗಳಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದಲ್ಲದೆ ಮೆಲಂಗಡಿ, ಕುಂಪಳ, ಅಬ್ಬಕ್ಕ ಇಂಡಸ್ಟ್ರಿಯಲ್ ಏರಿಯಾ ಹಾಗೂ ಕದೇಕಾರ್‌ನ ಆಡಂ ಕುದ್ರು, ಕಲ್ಲಾಪು, ತೊಕ್ಕೊಟ್ಟು ಜಂಕ್ಷನ್ ಸೇರಿದಂತೆ ಹಲವೆಡೆ ಈ ವ್ಯತ್ಯಯದ ಪರಿಣಾಮ ಕಾಣಿಸಿಕೊಳ್ಳಲಿದೆ.

ಸಾರ್ವಜನಿಕರು ಸಹಕರಿಸುವಂತೆ ವಿದ್ಯುತ್ ಇಲಾಖೆ ಮನವಿ ಮಾಡಿದೆ.

Exit mobile version