Site icon Ullalavani

ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ರಕ್ಷಿಸಿದ 16ರ ಹುಡುಗ

ಸೋಮೇಶ್ವರ; ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು 16ವರ್ಷದ ಹುಡುಗ ರಕ್ಷಿಸಿದ ಘಟನೆ ಉಳ್ಳಾಲದ ಸೋಮೇಶ್ವರ ಕಡಲ ಕಿನಾರೆಯಲ್ಲಿ ನಡೆದಿದೆ.

ಪಾಲಕರ ಜೊತೆ ಸೋಮೇಶ್ವರ ಕಡಲ ಕಿನಾರಕ್ಕೆ ಬಂದಿದ್ದ ವಿಟ್ಲ ಮೇಗಿನಪೇಟೆಯ ಮುಹಮ್ಮದ್ ಅರ್ಷಮನ್ (10) ಎಂಬ ಬಾಲಕ ಸಮುದ್ರದ ಅಲೆಗಳ ಸುಳಿಗೆ ಸಿಲುಕಿದ್ದ. ಅದನ್ನು ತಕ್ಷಣ ಗಮನಿಸಿದ ಮುಡಿಪು ಸಮೀಪದ ಆಶ್ರಫ್ ಎಂಬವರ ಪುತ್ರ ಮುಹಮ್ಮದ್ ಇಸ್ಮಾಯಿಲ್ ಫಾಯಿಝ್ (16) ಎಂಬಾತ ತಕ್ಷಣ ಜೀವದ ಹಂಗು ತೊರೆದು ಸಮುದ್ರಕ್ಕೆ ಹಾರಿ 10 ನಿಮಿಷಗಳ ಕಾಲ ಹೋರಾಟ ನಡೆಸಿ ಬಾಲಕನನ್ನು ರಕ್ಷಿಸಿದ್ದಾನೆ. ರಕ್ಷಣೆಯ ವೇಳೆ ಸುಸ್ತಾಗಿದ್ದ ಫಾಯಿಝ್ ಕೂಡ ಅಸ್ವಸ್ಥಗೊಂಡು ಮೂರ್ಛೆ ಹೋಗಿದ್ದ ತಕ್ಷಣ ಆತನನ್ನು ಮನೆಮಂದಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ಅರ್ಷಮನ್ ಕೂಡ ಅಪಾಯದಿಂದ ಪಾರಾಗಿದ್ದಾನೆ. ಮುಡಿಪು ಝೆನಿತ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಇಸ್ಮಾಯಿಲ್ ಫಾಯಿಝ್ ಇತ್ತಿಚೇಗೆ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ 509 ಅಂಕಗಳೊAದಿಗೆ ಉತ್ತೀರ್ಣನಾಗಿದ್ದ. ಕರ್ನಾಟಕ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೂಡ ಈತ ದ್ವಿತೀಯ ಸ್ಥಾನಿಯಾಗಿದ್ದಾನೆ. ಈತನ ಧೈರ್ಯ-ಸಾಹಸಕ್ಕೆ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅರ್ಷಮನ್ ಮತ್ತು ಫಾಯಿಝ್ ಹತ್ತಿರದ ಸಂಬAಧಿಗಳಾಗಿದ್ದು, ಎರಡೂ ಕುಟುಂಬದ ಸದಸ್ಯರು ಜೊತೆಯಾಗಿ ಸೋಮೇಶ್ವರ ಕಡಲತೀರಕ್ಕೆ ವಿಹರಿಸಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.

Exit mobile version