Site icon Ullalavani

ಕೋಟೆಕಾರ್ ಮರ್ಕಝುಲ್ ಹಿದಾಯ ವಿದ್ಯಾ ಸಂಸ್ಥೆಗೆ ಅತ್ಯುತ್ತಮ ಫಲಿತಾಂಶ

ಕೋಟೆಕಾರ್ : ಕೋಟೆಕಾರ್‌ ಅಜ್ಜಿನಡ್ಕ ದಲ್ಲಿರುವ ಮರ್ಕಝುಲ್ ಹಿದಾಯ ವಿದ್ಯಾ ಸಂಸ್ಥೆಯು ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ಮೂಲಕ ಗೌರವ ತಂದಿದೆ. ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ ಎರಡನ್ನೂ ನೀಡುತ್ತಿರುವ ಈ ಸಂಸ್ಥೆಯಿಂದ ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಫಲಿತಾಂಶದಲ್ಲಿ 3 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮೊಹಮ್ಮದ್ ಇಸ್ಮಯಿಲ್ ಐಮೆನ್ 554(88.64%), ಆಯಿಷಾ ಶಿರಿನ್ 545(87.20%) ಹಾಗೂ ನುಹಾ ಹಲೀಮಾ ಫಾತಿಮಾ 543(86.88%) ಅಂಕಗಳನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

Exit mobile version