Site icon Ullalavani

ಪ್ರಾಣಿ ಮನುಷ್ಯರು ಎಲ್ಲರೂ ಒಂದಾಗಿ ಬದುಕಬೇಕು ಅನ್ನುವ ಮನಸ್ಥಿತಿಯಿಂದ ಸಮತೋಲನ ಸಾಧ್ಯ : ಕ್ಯಾ. ಬ್ರಿಜೇಶ್ ಚೌಟ

ಉಳ್ಳಾಲ : ಮನುಷ್ಯರು, ಪ್ರಾಣಿಗಳು, ಪ್ರಕೃತಿ ಎಲ್ಲವೂ ಒಂದೇ ಸರಪಳಿಯಲ್ಲಿ ಜೋಡಿಸಿಕೊಂಡಿವೆ ಎಂಬ ಅರಿವು. ಎಲ್ಲರೂ ಒಂದಾಗಿ ಬದುಕಬೇಕು ಎನ್ನುವ ಮನಸ್ಥಿತಿ ಬೆಳೆಸಿದಾಗ ಮಾತ್ರ ಸಮತೋಲನ ಸಾಧ್ಯ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.

ಕರ್ನಾಟಕ ಪಶುವೈದ್ಯಕೀಯ ಸಂಘ , ದ. ಕ ಜಿಲ್ಲಾ ಘಟಕ , ಫೀಡ್ ಯಾನಿಮಲ್ಸ್ , ಸೇವ್ ಅನಿಮಲ್ಸ್ ಟ್ರಸ್ಟ್ ಮಂಗಳೂರು ಮತ್ತು ಅಸ್ತ್ರ ಗ್ರೂಪ್ ಇವರ ಸಂಯುಕ್ತ ಆಶ್ರಯದಲ್ಲಿ ನಂದಾ ದೀಪ ಸೇವಾ ಬಳಗ ಮಡ್ಯಾರ್ ಕೋಟೆಕಾರ್ ಇವರ ಸಹಕಾರದೊಂದಿಗೆ ಮಡ್ಯಾರ್ ಶಾಸ್ತಾರ ಅಶ್ವಥಕಟ್ಟೆ ಮುಂಭಾಗದಲ್ಲಿ ಶನಿವಾರ ವಿಶ್ವ ಪಶು ವೈದ್ಯಕೀಯ ದಿನಾಚರಣೆ 2026 ಅಂಗವಾಗಿ ಸಾಕು ಪ್ರಾಣಿಗಳಿಗೆ ( ನಾಯಿ ಮತ್ತು ಬೆಕ್ಕು ) ಹಾಗೂ ಬೀದಿ ನಾಯಿಗಳಿಗೆ ಹಮ್ಮಿಕೊಂಡ ಉಚಿತ ರೇಬಿಸ್ ಲಸಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮರಗಳನ್ನು ಬೆಳೆಸುವುದು, ಪ್ರಾಣಿಗಳನ್ನು ಕಾಪಾಡುವುದು, ಪರಿಸರದ ಜೊತೆ ಸಮನ್ವಯದಿಂದ ಬದುಕುವುದು — ಇದು ಜಗತ್ತಿನ ಸಹಜ ನಿಯಮ. ಹಿಂದಿನ ಕಾಲದಲ್ಲಿ ಜನರು ಪ್ರಕೃತಿಯೊಂದಿಗೆ ಹೆಚ್ಚು ಹೊಂದಿಕೊಂಡು ಬದುಕುತ್ತಿದ್ದರು. ಅದು ಸಹಜವಾದ ಜೀವನ ಶೈಲಿ ಆಗಿತ್ತು. ಇಂದಿನ ಕಾಲದಲ್ಲಿ ಮತ್ತೆ ಆ ಸಮನ್ವಯತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ವಿಶೇಷವಾಗಿ ಪ್ರಾಣಿಗಳಿಗೆ ಆಹಾರ ನೀಡುವವರು ಪ್ರಾಣಿ ಸಲಹುವವರು ಕೂಡ ಜಾಗರೂಕರಾಗಬೇಕು. ಅವರಿಗೆ ರೇಬೀಸ್ ಮುಂತಾದ ರೋಗಗಳ ಬಗ್ಗೆ ತಿಳಿವು ಇರಬೇಕು ಮತ್ತು ಸಮಯಕ್ಕೆ ಸರಿಯಾಗಿ ಲಸಿಕೆ ಪಡೆಯುವುದು ಮುಖ್ಯ. ಮಾನವ, ಪ್ರಾಣಿ, ಪ್ರಕೃತಿ ಈ ಮೂರೂ ಒಟ್ಟಾಗಿ ಸಮತೋಲನದಿಂದ ಬದುಕಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಶ್ವಾನ ಪ್ರೇಮಿ ರಜನಿ ಅವರು ಕೈಗೊಂಡಿರುವ ಕಾರ್ಯ ಮಹತ್ತರವಾದದ್ದು ಎಂದರು.

ಕರ್ನಾಟಕ ಪಶುವೈದ್ಯಕೀಯ ಸಂಘ ದ.ಕ ಇದರ ಅಧ್ಯಕ್ಷ ಡಾ. ಅರುಣ್ ಕುಮಾರ್ ಶೆಟ್ಟಿ ಎನ್ ಮಾತನಾಡಿ , ನಾಲ್ಕನೇ ಶನಿವಾರದಂದು ವಿಶ್ವದಾದ್ಯಂತ ವಿಶ್ವ ಸಾಕುಪ್ರಾಣಿ ದಿನ ಆಚರಿಸಲಾಗುತ್ತದೆ. ಈ ದಿನವು ಪಶುವೈದ್ಯರ ಸೇವೆ, ಜಾನುವಾರು ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯದ ಮಹತ್ವವನ್ನು ನೆನಪಿಸುವ ದಿನವಾಗಿದೆ.
ವಿಶ್ವದಾದ್ಯಂತ ಜನರಿಗೆ ಪ್ರಾಣಿ ಮೂಲದ ಪ್ರೋಟೀನ್ ಆಹಾರಗಳು ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಸುರಕ್ಷಿತವಾಗಿ ಒದಗಿಸುವ ವ್ಯವಸ್ಥೆ ಅತ್ಯಂತ ಮುಖ್ಯ. ಇದು ಆಹಾರ ಭದ್ರತೆ ಮತ್ತು ಸುರಕ್ಷಿತ ಆಹಾರಕ್ಕೆಗೆ ನೇರವಾಗಿ ಸಂಬಂಧಿಸಿದೆ. ಜನರಿಗೆ ನೀಡುವ ಆಹಾರವು ಸುರಕ್ಷಿತವಾಗಿರಲು, ಜಾನುವಾರುಗಳ ಆರೋಗ್ಯ ಉತ್ತಮವಾಗಿರಬೇಕು.
ದೇಶದಲ್ಲಿ ಜಾನುವಾರುಗಳ ರೋಗ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ ಮೂಲಕ ಲಸಿಕೆಗಳನ್ನು ನೀಡಲಾಗುತ್ತಿದೆ. 2019ರಿಂದ ಆರಂಭವಾದ ಈ ಯೋಜನೆಯಡಿ ಸಾಕುಪ್ರಾಣಿಗಳಿಗೆ ನಿರಂತರವಾಗಿ ಲಸಿಕೆ ನೀಡುವುದರಿಂದ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ. ಜಾನುವಾರುಗಳ ಆರೋಗ್ಯವು ಸಾರ್ವಜನಿಕರಿಗೆ ನೇರವಾಗಿ ಸಂಬಂಧಿಸಿದೆ. ಹಲವಾರು ಸಾಂಕ್ರಾಮಿಕ ರೋಗಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಆದ್ದರಿಂದ ಪಶು ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ.
ತಿಂಗಳಿಗೆ ಸರಾಸರಿ 2000 ನಾಯಿಗಳ ಕಡಿತ ಪ್ರಕರಣಗಳು ದಾಖಲಾದರೆ . 1600 ರಷ್ಟು ಮನೆ ನಾಯಿಗಳಿಂದ ವರದಿಗಳಾಗುತ್ತಿವೆ ಎಂಬುದು ಗಮನಾರ್ಹ. ಆದ್ದರಿಂದ ಮನೆ ನಾಯಿಗಳಿಗೆ ಸಹ ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದು ಅತ್ಯವಶ್ಯಕ.
ವಿಶೇಷವಾಗಿ ರೇಬಿಸ್ ರೋಗವನ್ನು ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ಕೊಡಿಸುವುದು, ಜಾಗೃತಿ ಮೂಡಿಸುವುದು ಮುಖ್ಯ ಎಂದರು.

ಅಸ್ತ್ರ ಗ್ರೂಪ್ ಮ್ಯಾನೇಜಿಂಗ್ ನಿರ್ದೇಶಕ ಲಂಚುಲಾಲ್ , ಫೀಡ್ ಅನಿಮಲ್ಸ್ , ಸೇವ್ ಅನಿಮಲ್ಸ್ ಟ್ರಸ್ಟ್ ಮಂಗಳೂರು ಇದರ ರಜನಿ ಶೆಟ್ಟಿ , ಕೋಟೆಕಾರು ಪಟ್ಟಣ ಪಂಚಾಯತ್ ಕೌನ್ಸಿಲರ್ ಹರೀಶ್ ರಾವ್ ಮಡ್ಯಾರ್, ಸುರೇಶ್ ಗುರೂಜಿ, ಪಶು ವೈದ್ಯಕೀಯ ಸಂಘ ದ ಉಪಾಧ್ಯಕ್ಷ ಡಾ. ಚಂದ್ರಶೇಖರ್, ನಡಾರು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರು ರಮೇಶ್ ಹೆಚ್ ಸಾಮಾನಿ, ಸದಾನಂದ ನಡಾರು, ಶೋಭಾ ಗಟ್ಟಿ , ಅನು ಸುವರ್ಣ , , ದಾಮೋದರ್ ಶೆಟ್ಟಿ , ಸುಮಿತ್ ಮಡ್ಯಾರ್, ಶೋಭಾ ರಾಣಿ , ಕೋಟೆಕಾರು ಪಶು ಇಲಾಖೆ ಸಿಬ್ಬಂದಿ ಆಶಾಲತಾ , ಜಯಂತಿ , ರಜನಿ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು.
ಹರೀಶ್ ರಾಜಕುಮಾರ್ ನಿರೂಪಿಸಿದರು. ಡಾ. ನಿತಿನ್ ಪ್ರಭು ಸ್ವಾಗತಿಸಿ ವಂದಿಸಿದರು.

ನಾಯಿ ಎಂದರೆ ಕೇವಲ ಸಾಕುಪ್ರಾಣಿ ಅಲ್ಲ; ಅದು ಮಾನವನ ಅತ್ಯಂತ ನಿಷ್ಠಾವಂತ ಸ್ನೇಹಿತ. ಇದೇ ಪ್ರಾಣಿ ಮೂಲಕ ರೇಬೀಸ್ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಜನರಿಗೆ ಸುಲಭವಾಗಿ ತಲುಪುವಂತಹ ಪರಿಣಾಮಕಾರಿ ಮಾರ್ಗವಾಗಿದೆ. ಜನರು ನೇರವಾಗಿ ನೋಡಿದಾಗ, ಅರಿತುಕೊಂಡಾಗ, ಅದರ ಪರಿಣಾಮ ಹೆಚ್ಚು ಆಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳನ್ನು ತಂದು ಲಸಿಕೆ ಹಾಕಿಸಿದ್ದಾರೆ. ಇದು ಕೋಟೆಕಾರು ಮಡ್ಯಾರ್ ನಲ್ಲಿ ಆಗಿರುವುದು ಶ್ಲಾಘನೀಯ.ಪ್ರಯತ್ನಿಸಿದ ಕಾರ್ಯಕ್ರಮ ಸಂಘಟಿಸಲು ಪ್ರಯತ್ನಿಸಿದ ಕೌನ್ಸಿಲರ್ ಹರೀಶ್ ರಾವ್ ತಂಡಕ್ಕೆ ಅಭಿನಂದನೆಗಳು.
ರಜನಿ ಶೆಟ್ಟಿ

ಕೋಟೆಕಾರು ಮದ್ಯಾರಿನಲ್ಲಿ ರೇಬೀಸ್ ಜಾಗೃತಿಗಾಗಿ ನಾಯಿ ತರಲಾಗಿದೆ ಎಂಬುದು ಕೇವಲ ಕಾರ್ಯಕ್ರಮವಲ್ಲ; ಅದು ಸಮಾಜದಲ್ಲಿ ಆರೋಗ್ಯ, ಜವಾಬ್ದಾರಿ ಮತ್ತು ಮಾನವೀಯತೆಯನ್ನು ಹೆಚ್ಚಿಸುವ ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ.
ಹರೀಶ್ ರಾವ್ ಮಡ್ಯಾರ್
ಕೌನ್ಸಿಲರ್

Exit mobile version