Site icon Ullalavani

*ಅನಿರುದ್ಧ್ ರವಿಚಂದರ್ ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್*

ಸುಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ಡಿಕನ್ಸ್ ಸ್ಟ್ರಕ್ಟ್ ತನ್ನ ಬ್ರಾಂಡ್ ಪಾರ್ಟ್ನರ್ ಆಗಿ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ಘೋಷಣೆ ಮಾಡಿದೆ. ರವಿಚಂದರ್ ಅವರ instagram ರೀಲ್ ನಲ್ಲಿ ಸ್ಕಿನ್ ಕೇರ್ ಡಿಕನ್ಸ್ ಸ್ಟ್ರಕ್ಟ್ ಇತ್ತು. ಇದನ್ನು ಅಭಿಮಾನಿಗಳು ಗಮನಿಸಿದರು. ಆ ಬಳಿಕ ಇದು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿತು. ಇಂಟರ್ನೆಟ್ ನಲ್ಲಿ ಸೆನ್ಸೇಶನ್ ಆದ ವಿಷಯ ಈಗ ಪಾರ್ಟ್ನರ್ ಶಿಪ್ ಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಸಂಸ್ಥೆಯ ಸಿಇಒ ಮಾಲಿನಿ ಅಡಪುರೆಡ್ಡಿ ಅವರು ಮಾತನಾಡಿದ್ದಾರೆ. ಜನರು ಸಹಜವಾಗಿ ಸ್ಪಂದಿಸಿ ಬ್ರಾಂಡ್ ನ್ನು ನೋಡಿದಾಗ ಅದನ್ನು ಮುಂದುವರಿಸಿಕೊಂಡು ಹೋಗುವುದು ನಮಗೆ ಸರಿ ಅನಿಸಿತು. ಅನಿರುದ್ಧ್ ಅವರು ನಮ್ಮ ಬ್ರಾಂಡಿಗೆ ಸರಿ ಹೊಂದುತ್ತಾರೆ. ಹೀಗಾಗಿ ಇಂಟರ್ನೆಟ್ ನಲ್ಲಿ ಉಂಟಾದ ವಿಡಿಯೋದ ಪ್ರಭಾವ ಸಹಯೋಗಕ್ಕೆ ಪ್ರೇರಣೆ ನೀಡಿತು ಎಂದು ಹೇಳಿದ್ದಾರೆ. ತಮ್ಮ ಹಿಟ್ ಹಾಡುಗಳು ಗಳಿಂದ ಯುವ ಜನರ ಮೇಲೆ ಅಪಾರ ಪ್ರಭಾವ ಬೀರಿರುವ ಅನಿರುದ್ಧ ರವಿಚಂದರ್ ಪ್ರೇಕ್ಷಕರಿಗೆ ಅವರ ಸ್ಟೈಲ್ ಮತ್ತು ವ್ಯಕ್ತಿತ್ವದಿಂದ ಇಷ್ಟವಾಗುತ್ತಾ ಬಂದಿದ್ದಾರೆ. ಈಗ ಪ್ರಸಿದ್ಧ ಸನ್ ಸ್ಕ್ರೀನ್ ಬ್ರಾಂಡ್ ನ ಪಾರ್ಟ್ನರ್ ಆಗಿ ಅವರು ಹೊರ ಹೊಮ್ಮಿದ್ದಾರೆ.

Exit mobile version