ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಿದೇಶದಲ್ಲೂ ದೇಶವಿರೋಧಿ ಹೇಳಿಕೆ ನೀಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಟೀಕಿಸಿದರು.ಖರ್ಗೆ ಮತ್ತು ರಾಹುಲ್ ಗಾಂಧಿಯವರು ಭಾರತ ವಿರೋಧಿಗಳು ಎಂದು ಆಕ್ಷೇಪಿಸಿದರು.
ಇವರು ವಿದೇಶಿ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಇವರಿಬ್ಬರು ಜಾರ್ಜ್ ಸೊರೊಸ್ ಏಜೆಂಟರು ಎಂದು ಟೀಕಿಸಿದರು. ಅವರ ಮಾನಸಿಕತೆಗೆ ತಕ್ಕಂತೆ ಇವರು ಭಾರತದಲ್ಲಿ ಕುಣಿಯುತ್ತಿದ್ದಾರೆ ಎಂದು ಖಂಡಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಖರ್ಗೆಯವರ ಮಾತು ಅಕ್ಷಮ್ಯ ಅಪರಾಧ ಮತ್ತು ದೇಶಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದವರು ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಬ್ರದರ್ಸ್ ಎಂದು ಕರೆದಿದ್ದಾರೆ ಎಂದು ಆಕ್ಷೇಪಿಸಿದರು.ವಿಧಾನಸೌಧದಲ್ಲಿ ಖರ್ಗೆಯವರ ಬಲಗೈ ಬಂಟ, ರಾಜ್ಯಸಭಾ ಸದಸ್ಯ ಪಾಕಿಸ್ತಾನ ಜಿಂದಾಬಾದ್ ಎಂದಿದ್ದರು. ಇದನ್ನು ಖರ್ಗೆಯವರು ಖಂಡಿಸಿರಲಿಲ್ಲ ಎಂದು ದೂರಿದರು. ಮುಂಬೈಯಲ್ಲಿ ಹೊಟೇಲ್ ಮೇಲೆ ಭಯೋತ್ಪಾದಕರ ದಾಳಿ ಆದಾಗ ಕಾಂಗ್ರೆಸ್ಸಿನವರು ಕೈಕಟ್ಟಿ ಕೂತಿದ್ದರು ಎಂದು ಗಮನ ಸೆಳೆದರು.