Site icon Ullalavani

ಕೆಸಿ ನಗರ ಮಲ್ಹರುಲ್ ಉಲೂಂ ಮದರಸ ಮೇಲಂತಸ್ತು ಉದ್ಘಾಟನೆ

ತಲಪಾಡಿ: ಕೆಸಿ ನಗರ ದಾರುಲ್ ಹುದಾ ಮುಸ್ಲಿಂ ಎಜುಕೇಶನ್ ಸೆಂಟರ್ (ಕೆಸಿ ನಗರ) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ಹರುಲ್ ಉಲೂಂ ಮದರಸದಲ್ಲಿ ಮೇಲಂತಸ್ತು ನಿರ್ಮಾಣ ಪೂರ್ಣಗೊಂಡು ಇತ್ತೀಚೆಗೆ ಉದ್ಘಾಟನೆ ನೆರವೇರಿತು.

ಮದರಸದಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಗಳ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮೇಲಂತಸ್ತಿನಲ್ಲಿ ತಗಡು ಶೀಟ್ ಅಳವಡಿಸಿ ಅಗತ್ಯ ಸೌಕರ್ಯಗಳೊಂದಿಗೆ ವಿಶಾಲವಾದ ತರಗತಿ ಕೊಠಡಿಯನ್ನು ನಿರ್ಮಿಸಿದೆ. ಈ ಹೊಸ ಕಟ್ಟಡವನ್ನು ಬಹು ಕೆ.ಪಿ. ಹುಸೈನ್ ಸಅದಿ (ಕೆಸಿ ರೋಡ್) ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದ ಜಮಾತ್ ಸದಸ್ಯರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಗಿದ್ದು, ಅವರಿಗಾಗಿ ಪ್ರಾರ್ಥನೆ ನೆರವೇರಿಸಲಾಯಿತು. ವೇದಿಕೆಯಲ್ಲಿ ಜಮಾತ್ ಅಧ್ಯಕ್ಷ ಯುಸಿ ಅಬ್ಬಾಸ್, ಮದರಸಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಸಾಹಾರಿ, ಮಸೀದಿ ಖತೀಬ್ ಅಬ್ದುಲ್ಲಾ ಮದಿನಿ, ಮಾಸಿನ್ ಉಸ್ತಾದ್, ಅಸರ ಪುಸ್ತಕ ಶಿಹ ಬುದ್ಧಿಂ ಜವರಿ, ಮುಸ್ತಫಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಜಮಾತ್ ಸದಸ್ಯರು ಮತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶುಭಾಶಯ ಕೋರಿದರು.

Exit mobile version