Site icon Ullalavani

ಮಂಗಳೂರು ಗ್ರಾ. ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ಸಂಘದ ಮಹಾಸಭೆ: ನೂತನ ಅಧ್ಯಕ್ಷೆಯಾಗಿ ಹರಿಣಾಕ್ಷಿ ಅಡ್ಯಂತಾಯ ಆಯ್ಕೆ

ಮಂಗಳೂರು: ಮಂಗಳೂರು ಗ್ರಾಮಾಂತರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಮಹಾಸಭೆ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ನೂತನ ಅಧ್ಯಕ್ಷೆಯಾಗಿ ಹರಿಣಾಕ್ಷಿ ಅಡ್ಯಂತಾಯ ಆಯ್ಕೆಯಾಗಿದ್ದು, ಕೋಟೆಕಾರ್ ವಲಯ ಉಪಾಧ್ಯಕ್ಷೆಯಾಗಿ ಪೂರ್ಣಿಮಾ ಶಿರ್ತಾಡಿ, ಕಾರ್ಯದರ್ಶಿಯಾಗಿ ಪ್ರೇಮ ಬೋಳಿಯಾರ್, ಜೊತೆ ಕಾರ್ಯದರ್ಶಿಯಾಗಿ ಹೇಮಾ ಕಟೀಲ್ ಹಾಗೂ ಕೋಶಾಧಿಕಾರಿಯಾಗಿ ಗಾಯತ್ರಿ ಬಜಪೆ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ವೇಳೆ ವಲಯದ ಅಧ್ಯಕ್ಷೆಯರನ್ನೂ ಆಯ್ಕೆ ಮಾಡಲಾಗಿದೆ. ಅಡ್ಯಾರ್ ಪುಷ್ಪಲತಾ, ಕಾಟಿಪಲ್ಲ ಪಾರ್ವತಿ, ಉಳ್ಳಾಲ ಧರ್ಮಿನಿ, ಕಟೀಲು ತುಳಸಿ, ಬಜಪೆ ಯೋಗಿನಿ, ಬೀಳುವಾಯಿ ಸುಜಯ, ಕುಡುಪು ಮಮತಾ, ಮುಲ್ಕಿ ನಳಿನಾಕ್ಷಿ, ಶಿರ್ತಾಡಿ ಪೂರ್ಣಿಮಾ, ಬೊಂದೆಲ್ ಕಸ್ತೂರಿ, ಕೋಟೆಕಾರ್ ಸುನಂದ, ಕೊಣಾಜೆ ವಿಜಯ, ಪೆರ್ಮನ್ನೂರು ಪ್ರೇಮ ಹಾಗೂ ಬೋಳಿಯಾರ್ ಮೋಂತಿ ಡಿಸೋಜಾ ಅವರು ವಲಯ ಅಧ್ಯಕ್ಷೆಯರಾಗಿ ಆಯ್ಕೆಯಾಗಿದ್ದಾರೆ.

Exit mobile version