ಮಂಗಳೂರು, ಎ.23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಎಸೆಸೆಲ್ಸಿ ಅಥವಾ ಐಟಿಐ ವಿದ್ಯಾರ್ಹತೆಯಲ್ಲಿ ಮೆಕ್ಯಾನಿಕ್ ಡೀಸೆಲ್, ಇಲೆಕ್ಟ್ರಿಷಿಯನ್, ಮೆಷಿನಿಸ್ಟ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್, ವೆಲ್ಡರ್, ಮೆಕ್ಯಾನಿಕ್ ಮೋಟರ್ ವೆಹಿಕಲ್, ಪ್ರೋಗ್ರಾಮಿಂಗ್ ಸಿಸ್ಟಮ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ವೃತ್ತಿಗಳಲ್ಲಿ ಉತ್ತೀರ್ಣರಾದವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ಮೇ 8ರೊಳಗೆ ನಗರದ ಬಿಜೈನಲ್ಲಿರುವ ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಮೇ12ರಂದು ಬೆಳಗ್ಗೆ 10ಕ್ಕೆ ಮೂಲ ದಾಖಲಾತಿಗಳೊಂದಿಗೆ ಶಿಶಿಕ್ಷು ಆಯ್ಕೆ ಸಮಿತಿಯ ಮುಂದೆ ನೇರ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಪ್ರಕಟನೆ ತಿಳಿಸಿದೆ.