Site icon Ullalavani

ಹಜ್‌ -2026 ಭಾರತೀಯ ಯಾತ್ರಿಕರಿಗೆ ಸಹಾಯವಾಣಿ ಪ್ರಕಟಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ


ಹೊಸದಿಲ್ಲಿ: 2026ರ ಹಜ್ ಯಾತ್ರೆ ಹಿನ್ನೆಲೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸಹಾಯವಾಣಿ ಸಂಖ್ಯೆಗಳು ಮತ್ತು ಇಮೇಲ್‌ಗಳನ್ನು  ಪ್ರಕಟಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಪಾಸ್‌ಪೋರ್ಟ್‌ , ವೀಸಾ, ಹಜ್ ಕುರಿತು ವಿಚಾರಣೆಗಾಗಿ ಸಂಪರ್ಕಿಸಬೇಕಾದ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದೆ. ಇದಲ್ಲದೆ ತುರ್ತು ಸಹಾಯವಾಣಿ, ಮರಣ ಸಂಭವಿಸಿದಲ್ಲಿ ವಿಚಾರಣೆ, ನೆರವು, ಆರ್‌ಟಿಐಯಡಿ ಮಾಹಿತಿಗಾಗಿ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಪ್ರಕಟಿಸಿದೆ.  ಅಗತ್ಯ ಸಹಾಯಕ್ಕಾಗಿ ಜಿದ್ದಾದಲ್ಲಿನ  ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಗೆ ಸಂಪರ್ಕಿಸುವಂತೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನೀವು ವಾಟ್ಸಾಪ್ ಮೂಲಕವೂ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.  
Landline Numbers: 00966126614276 / 00966122614093 Toll Free: 8002440003
Mobile: +966556122301 WhatsApp No: +966 536209704
Emergency Service: 0554403023 Consulate General of India, Jeddah Helpline Numbers & Emails pic.twitter.com/qotFMrZdoa— India in Jeddah (@CGIJeddah)

Exit mobile version