Site icon Ullalavani

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್(ರಿ) ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಯಾಸೀನ್ ಆಯ್ಕೆ

ದೇರಳಕಟ್ಟೆ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್(ರಿ) ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಯಾಸೀನ್ ಆಯ್ಕೆ: ದೇರಳಕಟ್ಟೆ ಬದ್ರಿಯ ಜುಮಾ ಮಸೀದಿಯ ಅಧೀನದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್(ರಿ) ಇದರ 2026 -27ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.


ಗೌರವಾಧ್ಯಕ್ಷರಾಗಿ ಬದ್ರಿಯ ಜುಮಾ‌ ಮಸೀದಿ ಅಧ್ಯಕ್ಷ ಅಬ್ದುಲ್ ಆರ್. ಅಹ್ಮದ್ ಶೇಟ್, ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಯಾಸೀನ್, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಪೋಯಿದೆಲ್ , ಪ್ರ. ಕಾರ್ಯದರ್ಶಿ ಅಬ್ದುಲ್ ಮುತ್ತಲಿಬ್, ಜೊತೆ ಕಾರ್ಯದರ್ಶಿಗಳಾಗಿ ಶಿಹಾಬುದ್ದಿನ್ ಡಿ, ಮಹಮ್ಮದ್ ಮುನ್ಸಿದ್. ಕೊಶಾಧಿಕಾರಿ ಬಷೀರ್ ಎಚ್, ಲೆಕ್ಕ ಪರಿಶೋಧಕರಾಗಿ ಉಸ್ಮಾನ್ ಎಂ.ಎಚ್, ಸದಸ್ಯರಾಗಿ ರಶೀದ್ ಡಿ.ಎಂ, ಹನೀಫ್ ಜೆ., ಅಬ್ದುಲ್ ಲತೀಫ್.ಡಿ, ಅಮೀರ್ ಹುಸೇನ್, ಮುನೀರ್ ಯಾಸೀನ್, ಹನೀಫ್ 2588, ಹಾಜಿ ಇಲ್ಯಾಸ್ ಡಿ, ಅಬೂಬಕ್ಕರ್ ಪಿ.ಕೆ ಆಯ್ಕೆಯಾದರು.

Exit mobile version