ಬಜಾಲ್: ಜೈಹಿಂದ್ ಫ್ರೆಂಡ್ಸ್ ಕಲ್ಲಗುಡ್ಡೆ ಬಜಾಲ್ ಇದರ 25ನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶನಿಪೂಜೆ ಹಾಗೂ ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಜೈಹಿಂದ್ ಫ್ರೆಂಡ್ಸ್ ಕಲ್ಲಗುಡ್ಡೆ ಸ್ಥಾಪಕಾಧ್ಯಕ್ಷರು, ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಹರೀಶ್ ರಾವ್ ಅವರು ಮಾತನಾಡಿ, ಈ ಭಾಗದಲ್ಲಿ ಸಂಸ್ಥೆಯು ಶ್ರದ್ಧಾಭಕ್ತಿಯಿಂದ ಮುನ್ನಡೆಯುತ್ತಿದ್ದು, ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಬೆಳ್ಳಿ ಮಹೋತ್ಸವದ ಹಿನ್ನಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಇವರ ಕಾರ್ಯ ಮುಂದೆಯೂ ಇದೇ ರೀತಿಯಲ್ಲಿ ಸಾಗಲಿ, ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಜೊತೆಗೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಜೈಹಿಂದ್ ಫ್ರೆಂಡ್ಸ್ ಕಲ್ಲಗುಡ್ಡೆ ಇದರ ಗೌರವಾಧ್ಯಕ್ಷರಾದ ದೇವ್‌ರಾಜ್ ಶೆಟ್ಟಿ ಕಲ್ಲಗುಡ್ಡೆ, ಅಧ್ಯಕ್ಷರಾದ ತಿಲಕ್ ಪೂಜಾರಿ ಕಲ್ಲಗುಡ್ಡೆ, ಉಪಾಧ್ಯಕ್ಷರಾದ ಅನಿಕೇತನ್ ಡಿ ಶೆಟ್ಟಿ ಕಲ್ಲಗುಡ್ಡೆ, ಕಾರ್ಯದರ್ಶಿಯಾದ ಸುಮಿತ್, ನಿಹಾಲ್, ಸದಸ್ಯರಾದ ನವೀನ್‌ರಾಜ್ ಶೆಟ್ಟಿ, ಧನ್‌ರಾಜ್ ಶೆಟ್ಟಿ, ಹರೀಶ್ ಪೂಜಾರಿ, ಶ್ರೀಧರ್, ಅನೂಪ್, ಜೀವನ್ ,ಮನೀಶ್, ಪವನ್, ಸಂಸ್ಥೆಗೆ ಸದಾ ಸಹಕರಿಸುತ್ತಿರುವ ಮಮತಾ ಶೆಟ್ಟಿ ಸೇರಿದಂತೆ ಸರ್ವಸದಸ್ಯರು ಉಪಸ್ಥಿತರಿದ್ದರು.