Site icon Ullalavani

ಅಬ್ಬಕ್ಕ ಉತ್ಸವವು ಜನರ ಉತ್ಸವ:ಕೆ.ಜಯರಾಮ ಶೆಟ್ಟಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾದ ಅಬ್ಬಕ್ಕಳ ದೇಶಪ್ರೇಮ, ಸ್ವಾಭಿಮಾನ, ಸೌಹಾರ್ದತೆಯನ್ನು ಎತ್ತಿ ತೋರಿಸುವಂತಹ ಈ ಅಬ್ಬಕ್ಕ ಉತ್ಸವವು ಜನರ ಉತ್ಸವ ಎಂದು ಮಾಜಿ ಶಾಸಕ ಹಾಗೂ ಸಮಿತಿಯ ಸ್ವಾಗತಧ್ಯಕ್ಷ ಕೆ.ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು.

ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕ್ಲಿಕ್ ಮ್ಯಾರೇಜ್ ಹಾಲ್‍ನಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ 19ನೇ ವರ್ಷದ ಅಬ್ಬಕ್ಕ ಉತ್ಸವದ ಪ್ರಥಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಬ್ಬಕ್ಕ ಉತ್ಸವವನ್ನು ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಆಚರಿಸುತ್ತಾ ಬರುತ್ತಿರುವುದು ಪ್ರಶಂಸನೀಯ. ಊರಿನ ಎಲ್ಲಾ ಧರ್ಮದವರೂ, ವರ್ಗದವರು ಪಾಲ್ಗೊಂಡು ಆಚರಿಸುವ ಈ ಉತ್ಸವವು ಸರಕಾರದ ಪ್ರೋತ್ಸಾಹದಿಂದ ಇನ್ನಷ್ಟೂ ಯಶಸ್ವಿಯಾಗಲೆಂದು ಹಾರೈಸಿದರು.

ಈ ಸಭೆಯಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಯು. ಸದಾನಂದ ಬಂಗೇರ, ಫಾ. ಪ್ರವೀಣ್ ಜೋಯ್ ಸಲ್ಡಾನಾ, ತೋನ್ಸೆಪುಷ್ಕಳ್ ಕುಮಾರ್, ಯು.ಪಿ.ಆಲಿಯಬ್ಬ, ಡಿ.ಎನ್.ರಾಘವ, ಎಂ.ವಾಸುದೇವ ರಾವ್, ಅಬ್ದುಲ್ ಅಜೀಜ್ ಹಕ್, ಲಕ್ಷ್ಮೀನಾರಾಯಣ ರೈ, ಹರೇಕಳ ತ್ಯಾಗಂ ಹರೇಕಳ, ಲೋಕನಾಥ ರೈ, ತುಕರಾಮ, ಕೆ.ಎಂ.ಕೆ.ಮಂಜನಾಡಿ, ರಾಧಕೃಷ್ಣ ರೈ, ಪ್ರಭಾಕರ ಜೋಗಿ, ಸತೀಶ್ ಭಂಡಾರಿ, ಬಾದ್‍ಷಾ ಸಾಂಬರ್‍ತೋಟ, ವಿಜಯಲಕ್ಷ್ಮಿ ಬಿ.ಶೆಟ್ಟಿ, ರತ್ನಾವತಿ ಜೆ ಬೈಕಾಡಿ, ನಮಿತಾ ಶ್ಯಾಂ, ದೇವಕಿ ಉಳ್ಳಾಲ್, ಧನಲಕ್ಷಿ, ಮಲ್ಲಿಕಾ ಭಂಡಾರಿ, ಅನುಪಮ ಸಿ.ಬಬ್ಬುಕಟ್ಟೆ ಉಪಸ್ಧಿತರಿದ್ದರು.

ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ವಂದಿಸಿದರು.

Exit mobile version