Site icon Ullalavani

ಕುಂಪಲ ಸರಕಾರಿ ಪ್ರೌಢ ಶಾಲೆಯಲ್ಲಿ “ಚಿಗುರು 2026” ಬೇಸಿಗೆ ಶಿಬಿರ ಸಮಾರೋಪ

ಉಳ್ಳಾಲ:ಹೆಚ್ಚಿನ ಪೋಷಕರು ಮತ್ತು ಶಿಕ್ಷಕರು ಪುಸ್ತಕಗಳಲ್ಲಿ ಇರೋ ವಿಚಾರಗಳನ್ನಷ್ಟೆ ಮಕ್ಕಳ ಮನಸ್ಸಿನೊಳಗೆ ತುಂಬಿಸುವುದರಲ್ಲಿ ನಿರತರಾಗಿರುತ್ತಾರೆ.ಬಿಡುವಿಲ್ಲದ ಕಲಿಕೆಯಲ್ಲಿ ಮಕ್ಕಳ ಮನಸ್ಸಿನೊಳಗಿರುವ ವಿಶೇಷ ಪ್ರತಿಭೆಗಳನ್ನ ಹೊರ ತರುವ ಕೆಲಸ ನಡೆಯುತ್ತಿರುವುದು ತೀರಾ ಕಡಿಮೆ.ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನ ಅನಾವರಣಗೊಳಿಸಲು ಬೇಸಿಗೆ ಶಿಬಿರಗಳು ಪರಿಣಾಮಕಾರಿಯಾಗಿವೆಯೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್ ಅಭಿಪ್ರಾಯಪಟ್ಟರು.

ಕುಂಪಲದ ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್,ರೋಟರಿ ಕ್ಲಬ್ ಮಂಗಳೂರು,ರೋಟರಿ ಸಮುದಾಯ ದಳ ಕುಂಪಲ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಪಲ ಇದರ ಸಹಭಾಗಿತ್ವದಲ್ಲಿ ಚಿತ್ತಾರ ಪ್ರತಿಷ್ಟಾನ ಪಿಲಾರು ಇವರ ಸಹಯೋಗದೊಂದಿಗೆ ಆರು ದಿನಗಳ ಕಾಲ ನಡೆದ “ಚಿಗುರು 2026” ಬೇಸಿಗೆ ಶಿಬಿರದ ಪ್ರಯುಕ್ತ ಕುಂಪಲದ ಕೇಸರಿ ಮಿತ್ರವೃಂದ ಸಭಾಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿದಾಗ ಆ ಪ್ರತಿಭೆಗೆ ಸೂಕ್ತ ಸಮಯದಲ್ಲಿ ಅಗತ್ಯ ಪ್ರೋತ್ಸಾಹ,ತರಬೇತಿಗಳು ಲಭಿಸಿದಲ್ಲಿ ವಿದ್ಯಾರ್ಥಿಗಳು ಕಲಿಕೆ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ ಸಾಧಿಸಲು ಸಾಕಷ್ಟು ಅವಕಾಶಗಳು ಲಭಿಸುತ್ತವೆಯೆಂದರು.


ಕಾರ್ಯಕ್ರಮದಲ್ಲಿ ಸಂವಿಂಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ‌ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಸಂಸ್ಮರಣೆ ನಡೆಯಿತು.ಕುಂಪಲ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಚಂದ್ರಕಲಾ ಅವರು ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಶಿಬಿರಾರ್ಥಿ ಮಕ್ಕಳಿಗೆ ಉಪನ್ಯಾಸ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಳ್ಳಾಲ ತಾಲೂಕು ಪರ್ಯಾವರಣ ಗತಿವಿದಿಯ ತಾಲೂಕು ಸಂಯೋಜಕರಾದ ಮನೋಹರ ಗಟ್ಟಿ ಕುಂಪಲ ಅವರು ಉಳ್ಳಾಲದ ವೀರ ರಾಣಿ ಅಬ್ಬಕ್ಕಳ ಜೀವನ ಚರಿತ್ರೆಯ ಬಗ್ಗೆ ಶಿಬಿರಾರ್ಥಿ ಮಕ್ಕಳಿಗೆ ಉಪನ್ಯಾಸ ನೀಡಿದರು.
ಶಿಬಿರ ನಡೆಸಿಕೊಟ್ಟ ಚಿತ್ತಾರ ಪ್ರತಿಷ್ಟಾನದ ಸಂಚಾಲಕರಾದ ನವೀನ್ ಪಿಲಾರು ಅವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳು ಮತ್ತು ಶಿಬಿರಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಕೇಸರಿ ಮಿತ್ರ ವೃಂದ ಟ್ರಸ್ಟ್ ನ ಅಧ್ಯಕ್ಷರಾದ ಸುಧಾಕರ ಕುಂಪಲ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಯೋಧರಾದ ನಾಗರಾಜ್ ಗಟ್ಟಿ,ಕೇಸರಿ ಮಿತ್ರ ವೃಂದ ಟ್ರಸ್ಟ್ ನ ಮಾತೃ ಮಂಡಳಿ ಅಧ್ಯಕ್ಷರಾದ ದಿವ್ಯಾ ರಾಕೇಶ್,ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಾಮರಸ್ಯ ಗತಿವಿದಿಯ ಜಿಲ್ಲಾ ಸಹ ಸಂಯೋಜಕ್ ಭರತ್ ಮಂಜನಾಡಿ ಮೊದಲಾದವರು ಉಪಸ್ಥಿತರಿದ್ದರು.
ಸಮೃದ್ಧಿ ಶೆಟ್ಟಿ ಸ್ವಾಗತಿಸಿದರು.ಕೇಸರಿ ಮಿತ್ರ ವೃಂದ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ನಾರಾಯಣ ಕುಂಪಲ ನಿರೂಪಿಸಿದರು.ಕು.ದಿಶಾ ವಂದಿಸಿದರು.

Exit mobile version