ಉಳ್ಳಾಲ: ತೊಕ್ಕೊಟ್ಟು ಗಾಂಧಿನಗರದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ನಡೆದು ಕ್ಷೇತ್ರವು ಸುಂದರವಾಗಿ ಕಂಗೊಳಿಸುತ್ತಿದೆ.ಧಾರ್ಮಿಕ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಎಲ್ಲರೂ ಒಗ್ಗೂಡಿ ಬಲಿಷ್ಠ ಕರ್ನಾಟಕ ಮತ್ತು ಭಾರತವನ್ನು ನಿರ್ಮಿಸಬೇಕು.ಇಂಜಿನಿಯರ್ ಮೂಲಕ ಪರಿಶೀಲನೆ ನಡೆಸಿ ಕ್ಷೇತ್ರದ ಜೀರ್ಣೋದ್ಧಾರ ಕಾಮಗಾರಿಗೆ ಗರಿಷ್ಠ ಮಟ್ಟದ ಸಹಕಾರವನ್ನ ನೀಡುವುದಾಗಿ ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.
ತೊಕ್ಕೊಟ್ಟು ಬಳಿಯ ಗಾಂಧಿನಗರದ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏ.29 ರಿಂದ ಮೇ.03 ರ ತನಕ ನಡೆಯಲಿರುವ ಪುನರ್ ಪ್ರತಿಷ್ಠಾಪನಾ ಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀಕ್ಷೇತ್ರದಲ್ಲಿ ಮಂಗಳವಾರದಂದು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕ್ಷೇತ್ರದ ತಂತ್ರಿಗಳಾದ ವೇದ ಮೂರ್ತಿ ಬ್ರಹ್ಮಶ್ರೀ ಪ್ರಕಾಶ್ ವಿ.ಹೊಳ್ಳ ಶಕ್ತಿನಗರ ಮಾತನಾಡಿ ಚಾಮುಂಡೇಶ್ವರಿ ಅಮ್ಮನವರು ಮತ್ತು ಪರಿವಾರ ಸಾನಿಧ್ಯಗಳ ಪುನರ್ ಪ್ರತಿಷ್ಠಾ ಕಲಶೋತ್ಸವ ಕಾರ್ಯಕ್ರಮವು ಸುಸಾಂಗವಾಗಿ ನಡೆಯಲಿಯೆಂದು ಶುಭಾಶಂಸನೆಗೈದರು.
ಇದೇ ಸಂದರ್ಭದಲ್ಲಿ ಸಂವಿಂಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಣೆಗೈದು ಸಂಸ್ಮರಣೆ ನಡೆಸಲಾಯಿತು.
ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಗಿರೀಶ್ ಕುಮಾರ್ ಯು.ಕೆ ಅಧ್ಯಕ್ಷತೆ ವಹಿಸಿದ್ದರು.ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಭಟ್ನಗರ,ಪಿಲಾರು ಸಾಯಿ ಮಂದಿರದ ಮುಖ್ಯಸ್ಥರಾದ ದಿನೇಶ್ ಶಾಂತಿ,ಕಾಪಿಕಾಡು ಬಬ್ಬುಸ್ವಾಮಿ ದೈವಸ್ಥಾನದ ರಾಜು ಗುರಿಕಾರ,ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಭಾಸ್ಕರ ತೊಕ್ಕೊಟ್ಟು,ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ರಾಘವ ಆರ್.ಉಚ್ಚಿಲ್,ಉಗ್ರಾಣ ಸಮಿತಿ ಪ್ರಧಾನ ಸಂಚಾಲಕರಾದ ದಿನೇಶ್ ಕಾಜವ,ಮಹಿಳಾ ಸಮಿತಿಯ ಪ್ರಧಾನ ಸಂಚಾಲಕರಾದ ಸುರೇಖಾ ಚಂದ್ರಹಾಸ್,ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ದೀಪಂ,ಉಳ್ಳಾಲ ನಗರಸಭೆಯ ಮಾಜಿ ಅಧ್ಯಕ್ಷರಾದ ಶಶಿಕಲಾ,ಮಾಜಿ ಉಪಾಧ್ಯಕ್ಷರಾದ ದಿನೇಶ್ ರೈ,ಪ್ರಮುಖರಾದ ದೇವದಾಸ್ ಭಂಡಾರಿ,ಅಮಿತಾ ಅಶ್ವಿನ್ ಬಂಡಿಕೊಟ್ಯ,ಚಂದ್ರಶೇಖರ್ ಉಚ್ಚಿಲ್,ರೋಹಿತ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕರಾದ ಭಗವಾನ್ ದಾಸ್ ಸ್ವಾಗತಿಸಿ,ಪ್ರವೀಣ್ ಬಸ್ತಿ ನಿರೂಪಿಸಿದರು.
ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಊರವರ ಸಹಕಾರದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಸಲು ಟ್ರಸ್ಟ್ ಮತ್ತು ಸಮಿತಿಯೊಂದನ್ನ ರಚಿಸಿದ್ದೇವೆ.ಚಾಮುಂಡೇಶ್ವರಿ ತಾಯಿಯ ಕ್ಷೇತ್ರದಲ್ಲಿ ಸ್ಥಳೀಯರಲ್ಲದೆ ಪರವೂರಿನ ಭಕ್ತರ ಅನೇಕ ಪ್ರಾರ್ಥನೆಗಳು ಈಡೇರಿವೆ.ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ಸಂಪೂರ್ಣ ಸಹಕಾರ ಅಪೇಕ್ಷಿಸುತ್ತೇವೆ.ಊರಿನ ಎಲ್ಲಾ ಭಕ್ತ ಭಾಂದವರು ಪುನರ್ ಪ್ರತಿಷ್ಠಾಪನಾ ಕಲಶೋತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸುಗೊಳಿಸಬೇಕು.
ಗಿರೀಶ್ ಕುಮಾರ್ ಯು.ಕೆ, ಆಡಳಿತ ಮೊಕ್ತೇಸರರು,ಚಾಮುಂಡೇಶ್ವರಿ ಕ್ಷೇತ್ರ