Site icon Ullalavani

ಉಳ್ಳಾಲ ವಲಯದಲ್ಲಿ ಗ್ಯಾಸ್ ದಂಧೆ ನಡೆಯುತ್ತಿದ್ಯಾ..? ಪರಿಶೀಲನೆ ಅಗತ್ಯ, ಕಠಿಣ ಕ್ರಮಕ್ಕೆ ಆಗ್ರಹ

ಉಳ್ಳಾಲ; ಮಧ್ಯಪ್ರಾಚ್ಯ ಯುದ್ಧಗಳಿಂದ ಗ್ಯಾಸ್ ಕೊರತೆ ಕಾಡುತ್ತಿದ್ದು, ಎಲ್ಲೆಡೆ ಗೊಂದಲಗಳು ಸೃಷ್ಠಿಯಾಗಿವೆ. ಆದರೆ ಉಳ್ಳಾಲ ವಲಯದಲ್ಲಿ ಗ್ಯಾಸ್ ವಿತರಣೆಯ ಬಗ್ಗೆ ಕೇಳಿಬರುತ್ತಿರುವ ಆರೋಪಗಳು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ. ಕಮರ್ಷಿಯಲ್ ಬಳಕೆಗೆ ಅಗತ್ಯವಿರುವ ಗ್ಯಾಸ್ ಸಿಲಿಂಡರ್‌ಗಳನ್ನು ಕಾನೂನುಬದ್ಧವಾಗಿ ಪಡೆಯಲು ಅರ್ಹರಾದವರಿಗೆ ಸಿಗದೇ, ಲೈಸನ್ಸ್ ಇಲ್ಲದವರಿಗೆ ಸುಲಭವಾಗಿ ದೊರೆಯುತ್ತಿದೆ ಎಂಬುದು ಸಾರ್ವಜನಿಕರ ಆರೋಪ. ಇದು ಕೇವಲ ನಿಯಮ ಉಲ್ಲಂಘನೆ ಮಾತ್ರವಲ್ಲ, ಅಕ್ರಮ ದಂಧೆಗೆ ದಾರಿ ಮಾಡಿಕೊಡುವ ವ್ಯವಸ್ಥೆಯ ವೈಫಲ್ಯವೂ ಆಗಿದೆ.

ಮೂರುವರೆ ಸಾವಿರದಿಂದ ನಾಲ್ಕು ಸಾವಿರ ರೂ.ವರೆಗೆ ಕಪ್ಪುಬಜಾರಿನಲ್ಲಿ ಗ್ಯಾಸ್ ಮಾರಾಟವಾಗುತ್ತಿದೆ ಎಂಬ ಮಾಹಿತಿ ಮತ್ತಷ್ಟು ಆತಂಕಕಾರಿಯಾಗಿದೆ. ತಾಲೂಕು ಆಡಳಿತದ ಆಹಾರ ಇಲಾಖೆ ಇಂತಹ ಅಕ್ರಮಗಳನ್ನು ಗಮನಿಸುತ್ತಿದೆಯೇ? ಅಥವಾ ಕಣ್ಣುಮುಚ್ಚಿ ಕುಳಿತಿದೆಯೇ? ಎಂಬ ಪ್ರಶ್ನೆಗಳು ಸಹಜವಾಗಿ ಎದುರಾಗುತ್ತಿವೆ.

ಅಧಿಕಾರಿಗಳು ತಕ್ಷಣವೇ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಲೈಸನ್ಸ್ ಇಲ್ಲದೆ ಗ್ಯಾಸ್ ವಿತರಣೆ ಮಾಡುವವರನ್ನು ನಿಗ್ರಹಿಸಿ, ಅರ್ಹ ಗ್ರಾಹಕರಿಗೆ ನ್ಯಾಯ ಒದಗಿಸುವುದು ಆಡಳಿತದ ಜವಾಬ್ದಾರಿ. ಇಲ್ಲವಾದರೆ, ಜನರ ನಂಬಿಕೆ ಸಂಪೂರ್ಣ ಕುಸಿಯುವ ಅಪಾಯ ಇದೆ.

ಸಾರ್ವಜನಿಕರು ಕೂಡ ಜಾಗೃತಿಯಿಂದ ಮುಂದಾಗಿ ಇಂತಹ ಅಕ್ರಮಗಳನ್ನು ಬಹಿರಂಗಪಡಿಸುವುದು ಅಗತ್ಯ. ಕಾನೂನು ಎಲ್ಲರಿಗೂ ಸಮಾನ ಎಂಬುದು ಕೇವಲ ಮಾತಾಗಿರಬಾರದು
ಅದನ್ನು ಕಾರ್ಯರೂಪಕ್ಕೆ ತರುವ ಸಮಯ ಬಂದಿದೆ. ಆದ್ದರಿಂದ ಇಂತಹ ಅಕ್ರಮಗಳು ಸಾರ್ವಜನಿಕರ ಗಮನಕ್ಕೆ ಬಂದರೆ ಸಂಬAಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಮೂಲಕ ಈ ದಂಧೆಗೆ ಬ್ರೇಕ್ ಹಾಕಬಹುದಾಗಿದೆ.

Exit mobile version