Site icon Ullalavani

ಮಂಗಳೂರು: ಏ.9ರಂದು ದಮ್ಮಾಮ್ ಮೂಲಕ ಕುವೈತ್ – ಮಂಗಳೂರು ವಿಶೇಷ ವಿಮಾನ ಸೇವೆ ಒದಗಿಸಿದ ಜಜೀರಾ ಏರ್‌ವೇಸ್‌

ಜಜೀರಾ ಏರ್‌ವೇಸ್‌ ಎ.9 ರಂದು ಕುವೈಟ್‌ ಮತ್ತು ಮಂಗಳೂರು ನಡುವೆ ದಮ್ಮಾಮ್‌ ಮೂಲಕ ವಿಶೇಷ ವಿಮಾನ ಹಾರಾಟ ನಡೆಸಿದೆ. ವಾರಕ್ಕೆ ಎರಡು ಬಾರಿ ಚಾರ್ಟರ್‌ ವಿಮಾನಗಳ ಸೇವೆ ಇರಲಿದೆ.

ಜಿಮ್ಮಿ ಮೌಸಾ ಅವರ ನಾಯಕತ್ವದಲ್ಲಿ 4 ಸದಸ್ಯರ ಸಿಬ್ಬಂದಿಯೊಂದಿಗೆ, ಸಂಜೆ 4.25 ಕ್ಕೆ ಅಗಮಿಸಿದ J9 3417 ದಮ್ಮಾಮ್-ಮಂಗಳೂರು ವಿಮಾನವು 11 ಮಕ್ಕಳು ಸೇರಿದಂತೆ 181 ಪ್ರಯಾಣಿಕರನ್ನು ಹೊತ್ತು ತಂದಿತು. ಬಳಿಕ ಸಂಜೆ 6.10 ಕ್ಕೆ ಹೊರಟ ಜೆ9 3418 ವಿಮಾನವು ಒಂದು ಮಗು ಸೇರಿದಂತೆ 151 ಪ್ರಯಾಣಿಕರು ಇದ್ದರು.

ವಿಮಾನವು ಕುವೈತ್‌ನಿಂದ ದಮ್ಮಾಮ್‌ಗೆ ಪ್ರಯಾಣಿಕರನ್ನು ರಸ್ತೆ ಮೂಲಕ ಸಾಗಿಸಿತು.ಜಜೀರಾ ಏರ್‌ವೇಸ್‌ ಈ ಹಿಂದೆ ಕೋವಿಡ್‌ ಸಮಯದಲ್ಲಿ ವಿಶೇಷ ಚಾರ್ಟರ್‌ ವಿಮಾನ ಕಾರ್ಯಚರಣೆಗಳನ್ನು ನಡೆಸಿತ್ತು. ಈ ವಿಮಾನಗಳು ಡಿಜಿಸಿಎ ವಿಶೇಷ ಅನುಮತಿಯ ಅಡಿಯಲ್ಲಿ ಕಾರ್ಯನಿರ್ವಹಸಲಿದ್ದು ಅಧಿಕಾರಿಗಳಿಂದ ಅನುಮೋದನೆ ದೊರೆತಲ್ಲಿ ವಿಮಾನಗಳ ಸಂಖ್ಯೆಯನ್ನು ಎಡರಿಂದ ನಾಲ್ಕಕ್ಕೆ ಹೆಚ್ಚಿಸಲು ವಿಮಾನಯಾನ ಸಂಸ್ಥೆಯು ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

Exit mobile version