ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅವರ ಪುತ್ರ ಶ್ರೇಯಾಂಕ್ ಆರ್. ಶೆಟ್ಟಿ ಅವರು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 597 (98.6%)ಅಂಕಗಳ ಮೂಲಕ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮತ್ತು ರೂಪ ಶೆಟ್ಟಿ ದಂಪತಿಗಳ ಪುತ್ರ ಶ್ರೇಯಾಂಕ್ ಆರ್ ಶೆಟ್ಟಿಯವರು ತಮ್ಮ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಆಳ್ವಾಸ್ ಕಾಲೇಜಿನಲ್ಲಿ ಪಡೆದಿದ್ದಾರೆ. ಶ್ರೇಯಾಂಕ್ ರಾಜ್ಯ ಮಟ್ಟದಲ್ಲಿ ಈಗ ತನ್ನನ್ನು ಗುರುತಿಸಿಕೊಂಡು ತನ್ನ ಹೆತ್ತವರು, ಪೋಷಕರು, ವಿದ್ಯಾಸಂಸ್ಥೆಯ ಹೆಸರನ್ನೂ ಉನ್ನತ ಮಟ್ಟಕ್ಕೆ ತಲುಪಿಸುವಲ್ಲಿ ಸಫಲರಾಗಿದ್ದಾರೆ.
ಡಾ. ರವೀಂದ್ರ ಶೆಟ್ಟಿಅವರ ಮೂವರು ಮಕ್ಕಳೂ ವಿದ್ಯಾಭ್ಯಾಸದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಾಗಿದ್ದಾರೆ. ಇವರ ಪ್ರಥಮ ಪುತ್ರಿ ಸ್ನೇಹ ಆರ್. ಶೆಟ್ಟಿ SSLC ಕನ್ನಡ ಮಾದ್ಯಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಹಾಗೂ ಮಂಗಳೂರು ವಲಯಕ್ಕೆ ಪ್ರಥಮ ಸ್ಥಾನಾರ್ಥಿಯಾಗಿ ಹೊರಹೊಮ್ಮಿದ್ದರು. ದ್ವಿತೀಯ ಪುತ್ರಿ ಶ್ರೇಯ ಆರ್. ಶೆಟ್ಟಿ ಅವರು 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೀಗ ಪುತ್ರ ಶ್ರೇಯಾಂಕ್ ಆರ್ ಶೆಟ್ಟಿಯೂ ದ್ವಿತೀಯ ಪಿಯುಸಿಯಲ್ಲಿ 597 ಸಾಧನೆ ಮಾಡಿ ತಮ್ಮ ಗರಿಮೆಯನ್ನು ಉನ್ನತೀಕರಿಸಿದ್ದಾರೆ.
ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಮಕ್ಕಳು
ಮೂವರು ಮಕ್ಕಳೂ ಬಜಗೋಳಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಿಂದಲೇ ತಮ್ಮ ವಿದ್ಯಾಭ್ಯಾಸ ಪ್ರಾರಂಭಿಸಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಪ್ರೌಢ ಶಿಕ್ಷಣವನ್ನು ಪಡೆದವರಾಗಿದ್ದಾರೆ ಎನ್ನುವುದು ವಿಶೇಷವಾಗಿದೆ.