Site icon Ullalavani

ಎ.25ರಂದು ಉಚಿತ ರೇಬಿಸ್ ಲಸಿಕಾ ಶಿಬಿರ

ಮಡ್ಯಾರ್ ; ವಿಶ್ವ ಪಶುವೈದ್ಯರ ದಿನಾಚರಣೆ ಪ್ರಯುಕ್ತ ಕರ್ನಾಟಕ ಪಶುವೈದ್ಯರ ಸಂಘ(ರಿ.) ದಕ್ಷಿಣ ಜಿಲ್ಲಾ ಘಟಕ ಮತ್ತು ಅಸ್ತç ಗ್ರೂಪ್ ಹಾಗೂ ಫೀಡ್ ಆನಿಮಲ್ ಸೆವ್ ಆನಿಮಲ್ ಟ್ರಸ್ಟ್ ನಂದಾದೀಪ ಸೇವಾ ಬಳಗ ಮಡ್ಯಾರ್ ಕೋಟೆಕಾರ್ ಮಂಗಳೂರು ಜಂಟಿ ಆಶ್ರಯದಲ್ಲಿ ಏ.25ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ಗಂಟೆವರೆಗೆ ಮಡ್ಯಾರ್ ಶಾಸ್ತರ ಅಶ್ವಥ ಕಟ್ಟೆಯ ಮುಂಭಾಗ ಉಚಿತ ರೇಬಿಸ್ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದೆ.

ಸಾಕು ಪ್ರಾಣಿ ನಾಯಿ ಮತ್ತು ಬೆಕ್ಕುಗಳು ಹಾಗೂ ಬೀದಿ ನಾಯಿಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಗುತ್ತದೆ.

ರೇಬೀಸ್ ಎಂಬುದು ಮಾನವ ಮತ್ತು ಪ್ರಾಣಿಗಳಿಗೆ ಅಪಾಯಕಾರಿಯಾದ ವೈರಸ್ ಸೋಂಕು ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಲಸಿಕೆ ನೀಡುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸುವುದು ಅವಶ್ಯಕವಾಗಿದೆ

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಶಿಬಿರದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ;ಅನು ಸುಪರ್ಣ: 9902299360, ಹರೀಶ್ ರಾವ್: 8123104592, ಶೋಭಾ ಗಟ್ಟಿ: 8123345514
ಜಯಂತ್: 8217273863

Exit mobile version