Site icon Ullalavani

ಉಳ್ಳಾಲದಲ್ಲಿ ಸುಸ್ಥಿರ ಸ್ವಚ್ಛತೆ–ಅಭಿವೃದ್ಧಿಗೆ ಒತ್ತು: ಸ್ಪೀಕರ್ ಯು.ಟಿ. ಖಾದರ್

ಕೊಣಾಜೆ; ಉಳ್ಳಾಲ ತಾಲೂಕಿನಾದ್ಯಂತ ಸೃಷ್ಟಿ ಮಾಡಿರುವ ಬಯಲು ಕಸಾಲಯಗಳನ್ನು ಅಳಿಸಿ ಸುಸ್ಥಿರ ಅಭಿವೃದ್ಧಿ ಕಾರ್ಯವನ್ನು ಅಭಿಯಾನ ರೀತಿಯಲ್ಲಿ ಶೀಘ್ರವಾಗಿ ಆರಂಭಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.

ಮುಡಿಪು ಜೀವನ್ ಮೂರ್ತಿ ಸರ್ವೋದಯ ಮಂಟಪದಲ್ಲಿ ನಡೆದ ಶೂನ್ಯ ಕಸ ನಿರ್ವಹಣೆ ಸ್ವಚ್ಛ ಮನೆ ಸ್ವಯಂ ಘೋಷಣೆ ಸುಸ್ಥಿರ ಸ್ವಚ್ಛತೆ ಸುಸ್ಥಿರ ಅಭಿವೃದ್ಧಿ ಸಂವಾದಕ್ಕೆ ಚಾಲನೆ ನೀಡಿ ಕೆಎ19.20 ಯುನೈಟೆಡ್ ಆಫ್ ರೋಡ್ಸ್ ಮಂಗಳೂರು ವತಿಯಿಂದ ಅಸಾಹಾಕಯ ಕುಟುಂಬಗಳ ಸಮಗ್ರ ಅಭಿವೃದ್ಧಿಗೆ ನೀಡಲಾದ ಒಂದು ಲಕ್ಷ ಇಪ್ಪತ್ತೆöÊದು ಸಾವಿರ ಮೊತ್ತದ ಶೈಕ್ಷಣಿಕ, ಆರೋಗ್ಯ, ಸ್ವ ಉದ್ಯೋಗ, ಸೋಲಾರ್ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.
ರೋಗ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಸ್ವಚ್ಛ ಪರಿಸರ ಅಗತ್ಯವಾಗಿದ್ದು, ಈ ದಿಸೆಯಲ್ಲಿ ಸರಕಾರ ಸಮಾಜ ಹಾಗೂ ಸಂಘಸAಸ್ಥೆಗಳು ಒಂದಾಗಿ ಶ್ರಮಿಸುವುದು ಅಗತ್ಯ ಎಂದರು.
ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಜನ ಶಿಕ್ಷಣ ಟ್ರಸ್ಟ್ ಹಾಗು ಉಳ್ಳಾಲ ಪುತ್ತೂರು, ಮಂಗಳೂರು ತಾಲೂಕಿನ 11 ಕುಟುಂಬಗಳಿಗೆ ನೆರವಾದ ಕೆಎ19.20 ಯುನೈಟೆಡ್ ಆಫ್ ರೋಡ್ಸ್ ಮಂಗಳೂರು ತಂಡದ ಸದಸ್ಯರ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಮಂಗಳೂರು ವಿವಿ ಕುಲಪತಿಗಳಾದ ಪ್ರೋ.ಪಿ.ಎಲ್.ಧರ್ಮ ಮಾತನಾಡಿ, ಗ್ರಾಮ ಅಧ್ಯಯನದೊಂದಿಗೆ ಕಸ ಮುಕ್ತ ಗ್ರಾಮ ನಿರ್ಮಾಣಕ್ಕೆ ಮಂಗಳೂರು ವಿವಿ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪಾಠದೊಂದಿಗೆ ಸ್ವಚ್ಛ ಗ್ರಾಮ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದೆರು.

ವಿಶ್ವಸಂಸ್ಥೆಯ 17 ಸಾಮಾಜಿಕ ಅಭಿವೃದ್ಧಿ ಗುರಿಗಳ ಬಗ್ಗೆ ಪಿಎ ಕಾಲೇಜು ಪ್ರಾಧ್ಯಾಪಕ ಡಾ.ಸಿ.ವಿ ಪೂಜಾರ್ ಅರಿವು ಮೂಡಿಸಿದರು. ಯುನೈಟೆಡ್ ಆಫ್ ರೋಡ್ಸ್ ಅಧ್ಯಕ್ಷ ಅವಿನಾಶ್ ಅಡಪ ನಡಿಗುತ್ತು, ನಾಸೀರ್ ನಡುಪದವು, ವಿಜೇಶ್ ನಾಯ್ಕ್ ನಡಿಗುತ್ತು, ಜನ ಜೀವನದ ಗೌರವ ಅಧ್ಯಕ್ಷ ರಮೇಶ ಶೇಣವ, ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ, ಮುಡಿಪು ಉತ್ಸವ ಸಮಿತಿಯ ಹೈದರ್ ಕೈರಂಗಳ, ಫ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಇಬ್ರಾಹೀಂ ನಡುಪದವು, ಉಮಾನಾಥ ಕೋಟ್ಯಾನ್, ಜನಿಯ್ಯತುಲ್ ಫಲಾಹ್‌ನ ಅಬ್ದುಲ್ ನಾಸೀರ್, ಅಬ್ದುಲ್ ರಹಿಮಾನ್ ಕೋಡಿಜಾಲ್, ಸೀರಾತಾಮ್, ಪಿಎ ಕಾಲೇಜಿ ಪ್ರೋ.ಪ್ರಶಾಂತ್ ಉಪಸ್ಥಿತರಿದ್ದರು.

Exit mobile version