ಈ ವಾರ್ಷಿಕ ಸಾಲಿನಲ್ಲಿ ಅತ್ಯುತ್ತಮ ಸೌಲಭ್ಯದೊಂದಿಗೆ ಪಿಯುಸಿ ಜೊತೆ ಆರಂಭವಾಗಲಿರುವ ಕಣಚೂರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ 100 ವಿದ್ಯಾರ್ಥಿಗಳಿಗೆ ಉಚಿತ ದಾಖಲಾತಿ ಮತ್ತು ಕಣಚೂರು ಮೆಡಿಕಲ್ ಕಾಲೇಜಿನ ದಶಮಾನೋತ್ಸವ ಕೊಡುಗೆಯಾಗಿ ನೀಡುವ ಒಂದು ಕೋಟಿ ರುಪಾಯಿ ವಿದ್ಯಾರ್ಥಿ ವೇತನಕ್ಕೆ ಅರ್ಹತಾ ಪರೀಕ್ಷೆಯು ಕಣಚೂರು ಹೆಲ್ತ್ ಸಿಟಿ ಕ್ಯಾಂಪಸ್ ನಲ್ಲಿ ನಡೆಯಿತು.
ಕಣಚೂರು ಸಂಸ್ಥೆಯು ಪಿಯುಸಿ ಇಂಟಿಗ್ರೇಟೆಡ್ NEET, JEE, NDA, CET, CA, ಮಾಡಲು ಬಯಸುವ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ನಡೆಸಿತ್ತು. ಭಾರತದ ಖ್ಯಾತ ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರರು ಮತ್ತು ಶ್ರೇಷ್ಠ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿ ಆರಂಭಿಸಿರುವ ಈ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಈ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಇದು ಹುಡುಗರಿಗೆ ಮತ್ತು ಹುಡುಗಿಯರಿಗೆ ಅವರ ಸಾಧನೆಗೆ ಅವಕಾಶ ಕಲ್ಪಿಸುವ ಪ್ರಯತ್ನವಾಗಿದೆ. ಗ್ರಾಮೀಣ ಮತ್ತು ಪ್ರತಿಭಾವಂತ ಆರ್ಥಿಕ ಹಿಂದುಳಿದ ಸಂಸಾರದ ಮಕ್ಕಳಿಗೆ ಪಿಯುಸಿ ಇಂಟಿಗ್ರೇಟೆಡ್ ಕಲಿಯಲು ಲಕ್ಷಾಂತರ ರೂಪಾಯಿ ನೀಡಬೇಕಿದೆ. ಈ ಪ್ರವೇಶ ಪರೀಕ್ಷೆ ಬರೆದು ಅರ್ಹತೆ ಪಡೆದ ವಿದ್ಯಾರ್ಥಿಗೆ ಇದು ಸಂಪೂರ್ಣ ಉಚಿತ ಆಗಲಿದೆ, ಸುಮಾರು ಎಂಟು ನೂರಕ್ಕಿಂತು ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು ಕೌನ್ಸಿಲಿಂಗ್ ನಂತರ ಮೊದಲ ಹಂತವಾಗಿ 380 ಮಕ್ಕಳನ್ನು ಆಯ್ಕೆ ಮಾಡಲಾಯಿತು. ಎರಡನೇ ಹಂತದ ಪರೀಕ್ಷೆ ನಡೆಸಲಾಗುವುದು ಎಂದು ಕಣಚೂರು ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ರಹ್ಮಾನ್ ಹೇಳಿದರು.
ಕಣಚೂರು ಸಂಸ್ಥೆಯ ಮೂಲಕ ನಾವು ಈ ಮೊದಲು ವಿವಿಧ ವೃತ್ತಿಪರ ಕೋರ್ಸ್ ಗೆ ಉಚಿತ ಸೀಟು, ವಿದ್ಯಾರ್ಥಿ ವೇತನ ನೀಡಿದ್ದೇವೆ ಆದರೆ ಈ ಬಾರಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಕ್ಕೆ ಅರ್ಹ ಮಕ್ಕಳಿಗೆ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಅಧಿಕೃತವಾಗಿ ನಾವು ಇದನ್ನು ಘೋಷಿಸಿದ್ದೇವೆ. ನೀವು ನಿಮಗೆ ಸಿಕ್ಕಿದ ಅವಕಾಶವನ್ನು ಸಮಾಜಕ್ಕೆ ಮರಳಿ ನೀಡಬೇಕು. ಆಗಲೇ ನಮ್ಮ ಪ್ರಯತ್ನ ನಿಮ್ಮ ಬದುಕು ಸಾರ್ಥಕ ಎಂದು ಕಣಚೂರು ಸಂಸ್ಥೆಯ ಸ್ಥಾಪಕರಾದ ಡಾಕ್ಟರ್ ಯು.ಕೆ. ಮೋನು ರವರು ವಿದ್ಯಾರ್ಥಿಗಳಿಗೆ ಹೇಳಿದರು.
ಕಣಚೂರು ಮೆಡಿಕಲ್ ಕಾಲೇಜಿನ ದಶಮಾನೋತ್ಸವದ ಕೊಡುಗೆಯಾಗಿ ಒಂದು ಕೋಟಿ ರುಪಾಯಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಇದು ಜಿಲ್ಲೆಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮತ್ತು ಈ ಪರೀಕ್ಷೆ ಬರೆದು ಅವರ SSLC ಅಂಕದ ಆಧಾರದಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.