Site icon Ullalavani

ಹಜ್ ದುರಂತ : 4000 ಸಿಬ್ಬಂದಿ-220 ಆಂಬ್ಯುಲೆನ್ಸ್ ಗಳಲ್ಲಿ ಕಾರ್ಯಾಚರಣೆ

ಸೌದಿ ಅರೇಬಿಯಾ: ಹಜ್ ಕಾಲ್ತುಳಿತದಲ್ಲಿ ಮೃತ ಯಾತ್ರಾರ್ಥಿಗಳ ಹೆಣಗಳ ರಾಶಿಯ ನಡುವೆ ಹಲವರು ಜೀವಂತವಿದ್ದರೆ, ರಕ್ಷಣಾ ಸಿಬ್ಬಂದಿ ಶ್ರಮ ಮೀರಿ ಕಾರ್ಯಾಚರಣೆ ಮುಂದುವರಿಸಿ ಅವರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಒಟ್ಟು 4000 ಸಿಬ್ಬಂದಿ 220 ಆಂಬ್ಯುಲೆನ್ಸ್ ಗಳ ಮೂಲಕ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಸಿಎನ್ ಎನ್ ವರದಿ ಮಾಡಿದೆ.

ಪವಿತ್ರ ಹಜ್ ಯಾತ್ರೆಯ ಕಡೆಯ ದಿನವಾದ ಗುರುವಾರದಂದು ಕಾಲ್ತುಳಿತಕ್ಕೆ ಸಿಲುಕಿ 717ಕ್ಕೂ ಮಂದಿ ಮೃತಪಟ್ಟು 860ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ 14 ಮಂದಿ ಭಾರತೀಯರು ಮೃತ ಪಟ್ಟಿದ್ದು ಅವರಲ್ಲಿ ಒಬ್ಬರು ತೆಲಂಗಾಣದ ಮಹಿಳೆ ಎಂದು ಗುರುತಿಸಲಾಗಿದೆ. ಗುಜರಾತ್ ನ ಒಂಭತ್ತು, ಜಾರ್ಖಂಡ್ ನ ಇಬ್ಬರು, ತಮಿಳುನಾಡಿನ ಓರ್ವ ಸೇರಿ ಒಟ್ಟು ಹದಿನಾಲ್ಕು ಮಂದಿ ಭಾರತೀಯರು ಸಾವನ್ನಪ್ಪಿದ್ದು ಇನ್ನು 13 ಮಂದಿಗೆ ಗಂಭೀರವಾಗಿ ಗಾಯಗಳಾಗಿವೆ.

ಮೆಕ್ಕಾದ ಪ್ರಮುಖ ಮಸೀದಿಯಿಂದ ಸುಮಾರು 7ಕಿ.ಮೀ. ದೂರವಿರುವ ಮೀನಾದಲ್ಲಿ ಗುರುವಾರದಂದು ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಲಕ್ಷಾಂತರ ಮಂದಿ ಒಂದೇ ಸ್ಥಳದಲ್ಲಿ ಏಕಕಾಲಕ್ಕೆ ಶೇತಾನನಿಗೆ ಕಲ್ಲೆಸೆಯುವ ಆಚರಣೆಗೆ ಮುಂದಾದಾಗ ಕಾಲ್ತುಳಿತ ಉಂಟಾಗಿದ್ದೆ ಘಟನೆಗೆ ಮೂಲ ಕಾರಣ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಹಜ್ ಯಾತ್ರೆಯ ಅಂತಿಮ ದಿನವಾದ ಸೈತಾನ್‍ಗೆ ಕಲ್ಲು ಎಸೆಯುವ ಆಚರಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ನೂಕುನೂಗ್ಗಲು ಸಂಭವಿಸಿದೆ.ಸರಕಾರದ ಸೂಚನೆ ಪಾಲಿಸದೇ ತಮಗೆ ಇಷ್ಟದ ಪ್ರಕಾರ ಯಾತ್ರಿಗಳು ಚಲಿಸಲು ಶುರು ಮಾಡಿದ್ದೇ ದುರಂತಕ್ಕೆ ಕಾರಣವೆಂದು ಸೌದಿ ಅರೇಬಿಯಾದ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಈ ಹಿಂದೆ 1990 ರಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ್ದು ಹಜ್ ಕಾಲ್ತುಳಿತಕ್ಕೆ ಸುಮಾರು 1,426 ಮಂದಿ ಸಾವನ್ನಪ್ಪಿದ್ದು ಈ ಬಾರಿ ನಡೆದ ಘಟನೆ ಹಜ್ ಇತಿಹಾಸದಲ್ಲಿ ಎರಡನೇ ಭಾರಿ ನಡೆದ ದುರಂತ ಎನ್ನಬಹುದಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಮೆಕ್ಕಾದಲ್ಲಿ ಭಾರಿ ಪ್ರಮಾಣದ ಕ್ರೇನ್ ಮುರಿದು ಬಿದ್ದ ಪರಿಣಾಮ 11 ಮಂದಿ ಭಾರತೀಯರ ಸಹಿತ ಒಟ್ಟು 115 ಮಂದಿ ಸಾವನ್ನಪ್ಪಿದ್ದರು ಈ ನೆನಪು ಮಾಸುವ ಮುನ್ನ ಇನ್ನೊಂದು ದುರ್ಘಟನೆ ಸಂಭವಿಸಿದ್ದು ಘಟನೆಗೆ ದೇಶ-ವಿದೇಶಗಳ ಜನರು ಸಂತಾಪ ಸೂಚಿಸಿದ್ದಾರೆ.

Exit mobile version