ಮಂಜೇಶ್ವರದಲ್ಲಿ ಹೈವೋಲ್ಟೇಜ್ ಕದನ ಶುರುವಾಗಿದೆ. ಹೌದು, ಕಳೆದ ಎರಡು ಚುನಾವಣೆಗಳಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಜಿದ್ದಾಜಿದ್ದಿನ ಹೋರಾಟದ ವೇದಿಕೆ ಸಿದ್ಧಗೊಂಡಿದೆ.
ಕಾಸರಗೋಡು ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ ಒಟ್ಟು 11 ಮಂದಿ ಆಭ್ಯರ್ಥಿಗಳು ಕಣದಲ್ಲಿದ್ದು, ಪ್ರಮುಖ ಪಕ್ಷಗಳ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಅಷ್ಟೇ ಅಲ್ಲದೆ, ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆಯೂ ಮಂಜೇಶ್ವರಕ್ಕಿದೆ.
ಕಾಸರಗೋಡು ; ಈ ಹಿಂದಿನ ಎರಡು ವಿಧಾನಸಭೆ ಚುನಾವಣೆಯಲ್ಲಿ ನೆಕ್ ಟು ನೆಕ್ ಫೈಟ್ ಕೊಟ್ಟ ಮಂಜೇಶ್ವರದಲ್ಲಿ ಈ ಬಾರಿಯೂ ಜಿದ್ದಾ ಜಿದ್ದಿನ ಹೋರಾಟಕ್ಕೆ ವೇದಿಕೆ ಸಿದ್ದಗೊಂಡಿದೆ.
ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಮತ್ತು ಅತೀ ಹೆಚ್ಚು ಆಭ್ಯರ್ಥಿಗಳು ಸ್ಪರ್ಧಿಸುತ್ತಿರುವ ವಿಧಾನಸಭೆ ಕ್ಷೇತ್ರವಾಗಿದೆ ಮಂಜೇಶ್ವರ ವಿಧಾನಸಭಾ ಕ್ಷೇತ್ರ. ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ 11 ಮಂದಿ ಇದ್ದಾರೆ. ಅದೇ ರೀತಿಯಲ್ಲಿ ಜಿಲ್ಲೆಯ ವಿಧಾನಸಭೆಗಳ ಪೈಕಿ ಅತೀ ಹೆಚ್ಚು ಮತದಾರರು ಇದ್ದರು. ಈ ಬಾರಿ 230113 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಇದರಲ್ಲಿ 115801 ಪುರುಷ ಮತದಾರರು ಮತ್ತು 114312 ಮಹಿಳಾ ಮತದಾರರಿದ್ದಾರೆ.
ಮಂಜೇಶ್ವರದಲ್ಲಿ ತೀವ್ರ ಸ್ಪರ್ಧೆ
ಈ ಚುನಾವಣೆಯು ಕೇರಳದ ಮೊದಲ ವಿಧಾನಸಭಾ ಕ್ಷೇತ್ರ ಹಾಗೂ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಜೇಶ್ವರವೂ ಈ ಬಾರಿ ತೀವ್ರ ಸ್ಪರ್ದೆ ನಡೆಯಲಿದೆ.
ಈ ಕ್ಷೇತ್ರವು ಬಿಜೆಪಿಯ ಪ್ರಬಲ ಬೆಂಬಲಿಗರಾಗಿದ್ದು, ಇದು ಹೆಚ್ಚಿನ ಸಂಖ್ಯೆಯ ಕನ್ನಡ ಮತ್ತು ತುಳು ಮಾತನಾಡುವ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಎರಡು ಬಾರಿ ಈ ಕ್ಷೇತ್ರದಲ್ಲಿ ಸಾವಿರಕ್ಕಿಂತಲೂ ಕಡಿಮೆ ಅಂತರದಲ್ಲಿ ಬಿಜೆಪಿ ಸ್ಥಾನವನ್ನು ಕಳೆದುಕೊಂಡಿರುವುದನ್ನು ಗಮನಿಸಿದರೆ ಈ ಬಾರಿ ತೀವ್ರ ಪ್ರಚಾರದೊಂದಿಗೆ ಸನಿಹದಲ್ಲಿದ್ದಾರೆ.
ಕೊಂಕಣಿ ಸಮುದಾಯ ಮತಗಳು
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕೊಂಕನಿ ಲ್ಯಾಟಿನ್ ಕ್ರಿಶ್ಚಿಯನ್ ತಮ್ಮ ಆಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಈ ಮೂಲಕ ಯುಡಿಎಫ್‌ಗೆ ಪರಂಪರಾತವಾಗಿ ಲಭಿಸುವ ಮತಗಳು ಪಕ್ಷೇತರ ಆಭ್ಯರ್ಥಿ ಜೀನ್ ಲವಿನಾ ಮೋತೇರೋ ಪಡೆಯುವ ಮತಗಳ ಮೇಲೆ ಫಲಿತಾಂಶ ಅವಲಂಬಿತವಾಗಿದೆ. ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಸರಕಾರಗಳು ಕೊಂಕಣಿ ಲ್ಯಾಟಿನ್ ಕ್ರಿಶ್ಚಿಯನ್ ಸಮುದಾಯ ಮತ್ತು ಮಂಜೇಶ್ವರ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದೆ ಎಂಬ ಹಿನ್ನಲೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು.
ಮಂಜೇಶ್ವರ ಕ್ಷೇತ್ರದಲ್ಲಿ ಕೊಂಕಣಿ ಕ್ರಿಶ್ಚಿಯನ್ ಸಮುದಾಯವು 6000ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದರೂ, ಜೀನ್ ಲವಿನಾ ಮೋಂತೇರೋ ಎಷ್ಟು ಮತಗಳನ್ನು ಪಡೆಯುತ್ತೇವೆಯೋ ಎಂಬುವುದ ಬಗ್ಗೆ ಕುತೂಹಲ ಹೊಂದಿದೆ.
8 ಗ್ರಾಮ ಪಂಚಾಯತ್‌ಗಳು
ಮAಜೇಶ್ವರ ವಿಧಾನಸಭಾಕ್ಷೇತ್ರದಲ್ಲಿ ಎಣ್ಮಕಜೆ, ಕುಂಬಳೆ, ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ಪೈವಳಿಕೆ , ಪುತ್ತಿಗೆ ಹಾಗೂ ವರ್ಕಾಡಿ ಗ್ರಾಪಂಗಳನ್ನು ಒಳಗೊಂಡಿದೆ. ಈ ಎಲ್ಲ ಗ್ರಾಮಪಂಗಳಲ್ಲಿ ಯುಡಿಎಫ್ ಆಡಳಿತ ನಡೆಸುತ್ತಿದೆ.
2026ರ ಆಭ್ಯರ್ಥಿಗಳು
ಎ.ಕೆ.ಎಂ ಆಶ್ರಫ್ ಮುಸ್ಲೀಂಲೀಗ್
ಕೆ.ಸುರೇಂದ್ರನ್ ಬಿಜೆಪಿ
ಕೆ.ಆರ್.ಜಯಾನಂದ -ಸಿಪಿಐಎಂ
ಸAಜೀವ -ಬಿಎಸ್‌ಪಿ
ಕಣ್ಣೂರು ಅಬ್ದುಲ್ಲ ಮಾಸ್ಟರ್ -ಪಕ್ಷೇತರ
ಅಬ್ದುಲ್ ಲತೀಫ್ ಐ ಪಕ್ಷೇತರ
ಜೀನ್ ಲವಿನಾ ಮೋತೇರೋ -ಪಕ್ಷೇತರ
ಜಾನ್ ಡಿ’ಸೋಜ ಐ- ಪಕ್ಷೇತರ
ಮೊಹಮ್ಮದ್ ಆಶ್ರಫ್ -ಪಕ್ಷೇತರ
ಮೊಹಮ್ಮದ್ ಆಶ್ರಫ್ ಕೆ.ಎಂ-ಪಕ್ಷೇತರ
ಡಿ.ಸುರೇAದ್ರನ್ ನಾಯರ್ -ಪಕ್ಷೇತರ